ADVERTISEMENT

ಟೇಬಲ್ ಟೆನಿಸ್‌ ಟೂರ್ನಿ: ಶರ್ವಿಲ್‌, ನಂದನಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 14:15 IST
Last Updated 21 ಆಗಸ್ಟ್ 2025, 14:15 IST
ಪ್ರಶಸ್ತಿಯೊಂದಿಗೆ ಶರ್ವಿಲ್ ಕರಂಬ್ಳೆಕರ ಮತ್ತು ನಂದನಾ ಬಂಡಿ
ಪ್ರಶಸ್ತಿಯೊಂದಿಗೆ ಶರ್ವಿಲ್ ಕರಂಬ್ಳೆಕರ ಮತ್ತು ನಂದನಾ ಬಂಡಿ   

ಹೊಸಪೇಟೆ: ಶರ್ವಿಲ್ ಕರಂಬ್ಳೆಕರ ಮತ್ತು ನಂದನಾ ಬಂಡಿ ಅವರು ಇಲ್ಲಿ ಗುರುವಾರ ಆರಂಭವಾದ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಹೋಪ್ಸ್‌ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು.

ವಿಜಯನಗರ ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿನ ತುಂಗಭದ್ರಾ ಬೋರ್ಡ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಬಾಲಕರ ಫೈನಲ್‌ನಲ್ಲಿ ಶರ್ವಿಲ್ 9-11, 11-7, 11-9, 11-9ರಿಂದ ಅರ್ಣವ್‌ ಮಿಥುನ್‌ ಅವರನ್ನು ಮಣಿಸಿದರು.

ಸೆಮಿಫೈನಲ್‌ನಲ್ಲಿ ಶರ್ವಿಲ್‌ 11-9, 11-4, 10-12, 11-5ರಿಂದ ಪೂರಬ್ ಬಿಸ್ವಾಸ್ ವಿರುದ್ಧ; ಅರ್ಣವ್‌ 11-4, 11-4, 11-8ರಿಂದ ಮುಕುಂದ್ ರಾವ್‌ ವಿರುದ್ಧ ಜಯ ಗಳಿಸಿದ್ದರು. 

ADVERTISEMENT

ಬಾಲಕಿಯರ ಫೈನಲ್‌ನಲ್ಲಿ ನಂದನಾ 9-11, 11-7, 12-10, 9-11, 11-9ರಿಂದ ಸಮನ್ವಿ ಸಂದೀಪ್ ವಿರುದ್ಧ ಗೆಲುವು ಸಾಧಿಸಿದರು. ಸೆಮಿಫೈನಲ್‌ನಲ್ಲಿ ನಂದನಾ 8 11, 11-9, 7-11, 11-8, 11-9ರಿಂದ ತಮನ್ನಾ ನೇರ್ಲಾಜೆ ಅವರನ್ನು; ಸಮನ್ವಿ 15-13, 11-2, 11-3ರಿಂದ ಸಾನ್ವಿ ಹರಿಪ್ರಸಾದ್‌ ರಾವ್ ಅವರನ್ನು ಮಣಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.