ADVERTISEMENT

ಟೇಕ್ವಾಂಡೊ: ಫಿಕ್ಸಿಂಗ್ ಆರೋಪ

ಪಿಟಿಐ
Published 4 ಫೆಬ್ರುವರಿ 2025, 19:10 IST
Last Updated 4 ಫೆಬ್ರುವರಿ 2025, 19:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಡೆಹ್ರಾಡೂನ್: ಫಿಕ್ಸಿಂಗ್ ಆರೋಪಗಳು ಮೇಲ್ನೋಟಕ್ಕೆ ದೃಢಪಟ್ಟ ಕಾರಣ ರಾಷ್ಟ್ರೀಯ ಕ್ರೀಡೆಗಳ ಟೇಕ್ವಾಂಡೊ ನಿರ್ದೇಶಕ ಟಿ.ಪ್ರವೀಣ್ ಕುಮಾರ್ ಅವರನ್ನು ಬದಲಾಯಿಸಲಾಗಿದ್ದು, ಕ್ರೀಡೆಗಳ ತಾಂತ್ರಿಕ ನಿರ್ವಹಣಾ ಸಮಿತಿಯು (ಜಿಟಿಸಿಸಿ) ಅವರ ಸ್ಥಾನಕ್ಕೆ ಎಸ್‌.ದಿನೇಶ್ ಕುಮಾರ್ ಅವರನ್ನು ನೇಮಕ ಮಾಡಿದೆ.

‘16 ತೂಕ ವಿಭಾಗಗಳ ಪೈಕಿ 10 ಸ್ಪರ್ಧೆಗಳಲ್ಲಿ ಪದಕಗಳು ಯಾರಿಗೆ ಸಿಗಬೇಕು ಎನ್ನುವುದು ಮೊದಲೇ ನಿರ್ಧಾರವಾಗಿತ್ತು. ಇದಕ್ಕಾಗಿ ಪ್ರವೀಣ್ ಕುಮಾರ್ ತಮಗೆ ಬೇಕಾದ ಆಯ್ದ ರಾಜ್ಯ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯ ಕಾರಿ ಸಮಿತಿ ಸದಸ್ಯರನ್ನೇ ನೇಮಕ ಮಾಡಿದ್ದಾರೆ’ ಎನ್ನುವ ಆತಂಕಕಾರಿ ವಿಷಯ ಬಹಿರಂಗವಾದ ಬೆನ್ನಲ್ಲೇ ಜಿಟಿಸಿಸಿ ಕ್ರಮ ಕೈಗೊಂಡಿದೆ.

ವಿಚಾರಣೆ ನಡೆಸಿದ ಮೂವರು ಸದಸ್ಯರ ದುರ್ಬಳಕೆ ತಡೆ ಸಮಿತಿ (ಪಿಎಂಸಿಸಿ) ಶಿಫಾರಸುಗಳನ್ನು ಅಂಗೀಕರಿಸಲಾಗಿದೆ ಎಂದು ಜಿಟಿಸಿಸಿ ಅಧ್ಯಕ್ಷೆ ಸುನೈನಾ ಕುಮಾರಿ ತಿಳಿಸಿದ್ದಾರೆ. ಫೆ. 4 ರಿಂದ ಟೇಕ್ವಾಂಡೊ ಸ್ಪರ್ಧೆಗಳು ನಿಯೋಜನೆಯಾಗಿವೆ.

ADVERTISEMENT

ಜಿಟಿಸಿಸಿ ನಿರ್ಧಾರವನ್ನು ಅಧ್ಯಕ್ಷೆ ಪಿ.ಟಿ.ಉಷಾ ಸ್ವಾಗತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.