ADVERTISEMENT

ಅಮೆರಿಕ ಓಪನ್ ಬ್ಯಾಡ್ಮಿಂಟನ್‌: ಸೆಮಿಗೆ ತನ್ವಿ ಶರ್ಮಾ-ಆಯುಷ್‌ ಶೆಟ್ಟಿ

ಪಿಟಿಐ
Published 28 ಜೂನ್ 2025, 13:30 IST
Last Updated 28 ಜೂನ್ 2025, 13:30 IST
<div class="paragraphs"><p>ಭಾರತದ ತನ್ವಿ ಶರ್ಮಾ ಷಟ್ಲ್‌ಕಾಕ್‌ ಅನ್ನು ಹಿಂತಿರುಗಿಸುವ ಯತ್ನದಲ್ಲಿ... </p></div>

ಭಾರತದ ತನ್ವಿ ಶರ್ಮಾ ಷಟ್ಲ್‌ಕಾಕ್‌ ಅನ್ನು ಹಿಂತಿರುಗಿಸುವ ಯತ್ನದಲ್ಲಿ...

   

-ಪಿಟಿಐ ಚಿತ್ರ

ಅಯೋವ (ಅಮೆರಿಕ): ಭಾರತದ ಭರವಸೆಯ ಶಟ್ಲರ್‌ಗಳಾದ ತನ್ವಿ ಶರ್ಮಾ ಮತ್ತು ಆಯುಷ್‌ ಶೆಟ್ಟಿ ಅವರು ಅಮೆರಿಕ ಓಪನ್ ಬ್ಯಾಡ್ಮಿಂಟನ್ ಸೂಪರ್‌ 300 ಟೂರ್ನಿಯಲ್ಲಿ ಶುಕ್ರವಾರ ಸೆಮಿಫೈನಲ್ಸ್ ತಲುಪಿದರು.

ADVERTISEMENT

16 ವರ್ಷ ವಯಸ್ಸಿನ ತನ್ವಿ ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 21–13, 21–16 ರಿಂದ ಮಲೇಷ್ಯಾದ ಎದುರಾಳಿ ಕರುಪತೆವಾನ್ ಲೆಟ್ಶಾನಾ ಅವರನ್ನು ಹಿಮ್ಮೆಟ್ಟಿಸಿದರು.  ತನ್ವಿ ಈ ಮಟ್ಟದ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದು ಇದೇ ಮೊದಲು.

ಆಯುಷ್‌ ಪುರುಷರ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜೂನಿಯರ್ ವಿಶ್ವ ಚಾಂಪಿಯನ್‌, ಚೀನಾ ತೈಪಿಯ ಕುವೊ ಕ್ವಾನ್ ಲಿನ್ ಅವರನ್ನು 22–20, 21–9 ರಲ್ಲಿ ನೇರ ಗೇಮ್‌ಗಳಿಂದ ಪರಾಭವಗೊಳಿಸಿದರು.

ಆದರೆ ಪುರುಷರ ಡಬಲ್ಸ್‌ನಲ್ಲಿ ಹರಿಹರನ್ ಆಮ್ಸಕರುಣನ್‌ –ರುಬನ್ ಕುಮಾರ್‌ ರೆಥಿನಾಸಭಾಪತಿ ಸವಾಲು ಅಂತ್ಯಗೊಂಡಿತು. ಈ ಜೋಡಿ ಕ್ವಾರ್ಟರ್‌ಫೈನಲ್‌ನಲ್ಲಿ 9–21, 19–21 ರಿಂದ ಚಿಯಾಂಗ್ ಚೀನ್‌– ವೀ ವು ಸುವಾನ್‌ ಯಿ (ಚೀನಾ ತೈಪಿ) ಜೋಡಿಯನ್ನು ಸೋಲಿಸಿತು.

ತನ್ವಿ ಸೆಮಿಫೈನಲ್‌ನಲ್ಲಿ ಉಕ್ರೇನಿನ ಪೊಲಿನಾ ಬುಹ್ರೋವಾ ಅವರನ್ನು ಎದುರಿಸಲಿದ್ದಾರೆ.  ಪೊಲಿನಾ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಮೂರನೇ ಶ್ರೇಯಾಂದಕ ಸುಂಗ್‌ ಶುವೊ–ಯುನ್‌ (ಚೀನಾ ತೈಪಿ) ಅವರಿಗೆ ಆಘಾತ ನೀಡಿದರು.

ಆಯುಷ್‌, ಪುರುಷರ ವಿಭಾಗದ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಚೌ ಟಿಯೆನ್‌–ಚೆನ್‌ (ಚೀನಾ ತೈಪೆ) ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.