ADVERTISEMENT

ಏಪ್ರಿಲ್ 26ಕ್ಕೆ ಟಿಸಿಎಸ್‌ ವಿಶ್ವ ಟೆನ್‌ ಕೆ ಓಟ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 23:09 IST
Last Updated 12 ಫೆಬ್ರುವರಿ 2026, 23:09 IST
   

ಬೆಂಗಳೂರು: 18ನೇ ಆವೃತ್ತಿಯ ಟಿಸಿಎಸ್‌ ವಿಶ್ವ ಟೆನ್‌ ಕೆ ಓಟವು ಏಪ್ರಿಲ್‌ 26ರ ಭಾನುವಾರ ನಡೆಯಲಿದೆ. ವಿವಿಧ ವಿಭಾಗಗಳಲ್ಲಿ ನಡೆಯಲಿರುವ ಸ್ಪರ್ಧೆಗಳಿಗೆ ನೋಂದಣಿ ಆರಂಭವಾಗಿದೆ.

‘ಪ್ರತಿಬಾರಿಯಂತೆ ಕಬ್ಬನ್ ರಸ್ತೆಯಲ್ಲಿ ಓಟ ಆರಂಭವಾಗಲಿದ್ದು, ಮಾಣೆಕ್‌ ಶಾ ಪರೇಡ್‌ ಮೈದಾನದ ಮುಂಭಾಗದಲ್ಲಿ ಸಂಪನ್ನಗೊಳ್ಳಲಿದೆ. ಈ ಓಟವು ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೋಡ್ ರೇಸ್ ದರ್ಜೆ ಹೊಂದಿದೆ. ವಿಜೇತರಿಗೆ ಒಟ್ಟು ₹1.9 ಕೋಟಿ ಬಹುಮಾನ ನೀಡಲಾಗುವುದು’ ಎಂದು ಕಾರ್ಯಕ್ರಮ ಪ್ರವರ್ತಕರಾದ ‘ಪ್ರೊಕ್ಯಾಮ್ ಇಂಟರ್‌ನ್ಯಾಷನಲ್‌’ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಎಂದೆಂದಿಗೂ ಬೆಂಗಳೂರು’ ಥೀಮ್‌ ಅಡಿಯಲ್ಲಿ ಈ ವರ್ಷದ ಓಟವನ್ನು ಆಯೋಜಿಸಲಾಗಿದೆ. ಜನಪ್ರಿಯ ಮಜಾ ರನ್‌ ಸ್ಪರ್ಧೆಯು ಈ ಬಾರಿಯೂ ಇರಲಿದೆ. ಓಟದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು https://tcsworld10k.procam.in/ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಭಾರತದ ಮಾಜಿ ಲಾಂಗ್‌ಜಂಪ್‌ ತಾರೆ, ಭಾರತ ಅಥ್ಲೆಟಿಕ್‌ ಫೆಡರೇಷನ್‌ನ ಹಿರಿಯ ಉಪಾಧ್ಯಕ್ಷೆ ಅಂಜು ಬಾಬಿ ಜಾರ್ಜ್, ಬೆಂಗಳೂರು ಪೊಲೀಸ್ ಕಮಿಷನರ್‌ ಸೀಮಂತ್ ಕುಮಾರ್ ಸಿಂಗ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ಡಿ.ರಂದೀಪ್‌, ಟಿಸಿಎಸ್‌ ಬೆಂಗಳೂರು ವಲಯ ಮುಖ್ಯಸ್ಥ ಸುನಿಲ್‌ ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.