ADVERTISEMENT

ಜಾರ್ಜ್ ಫ್ಲಾಯ್ಡ್‌ ಅಂತ್ಯಕ್ರಿಯೆ ಖರ್ಚು ಭರಿಸಲಿರುವ ಮೇವೆದರ್

ಏಜೆನ್ಸೀಸ್
Published 2 ಜೂನ್ 2020, 19:45 IST
Last Updated 2 ಜೂನ್ 2020, 19:45 IST
ಫ್ಲಾಯ್ಡ್ ಮೇವೆದರ್
ಫ್ಲಾಯ್ಡ್ ಮೇವೆದರ್   

ನ್ಯೂಯಾರ್ಕ್: ಅಮೆರಿಕದಲ್ಲಿ ಹತ್ಯೆಯಾಗಿರುವ ಕಪ್ಪು ಜನಾಂಗದ ಜಾರ್ಜ್‌ ಫ್ಲಾಯ್ಡ್‌ ಅಂತ್ಯಕ್ರಿಯೆ ಮತ್ತು ಸ್ಮರಣೆ ಸೇವೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ವೃತ್ತಿಪರ ಬಾಕ್ಸರ್‌ ಫ್ಲಾಯ್ಡ್‌ ಮೇವೆದರ್ ಘೋಷಿಸಿದ್ದಾರೆ.

ಮೇ 25ರಂದು ಅಮೆರಿಕದಲ್ಲಿ ಪೊಲೀಸ್ ಅಧಿಕಾರಿಯು ಫ್ಲಾಯ್ಡ್ ಹತ್ಯೆ ಮಾಡಿದ್ದರಿಂದ ಜನಾಂಗೀಯ ಗಲಭೆಗಳು ಭುಗಿಲೆದ್ದಿವೆ. ಇದರಿಂದಾಗಿ ಕ್ರೀಡಾಕ್ಷೇತ್ರದ ಹಲವು ಗಣ್ಯರು ಫ್ರಾಯ್ಡ್ ಹತ್ಯೆಯನ್ನು ಖಂಡಿಸಿದ್ದಾರೆ. ಜೂನ್ 9ರಂದು ಹೂಸ್ಟನ್‌ನಲ್ಲಿ ಜಾರ್ಜ್ ಫ್ಲಾಯ್ಡ್ ಅಂತಿಮ ಸಂಸ್ಕಾರ ನಡೆಯಲಿದೆ.

‘ಮೇವೆದರ್ ಅವರು ಜಾರ್ಜ್ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಎಲ್ಲ ರೀತಿಯ ಸಹಾಯ ಒದಗಿಸುವುದಾಗಿ ಹೇಳಿದ್ದಾರೆ’ ಎಂದು ಮೇವೆದರ್ ಸಿಇಒ ಹೇಳಿದ್ದಾರೆ.

ADVERTISEMENT

ವೃತ್ತಿಪರ ಬಾಕ್ಸಿಂಗ್‌ನಲ್ಲಿ 50 ಪಂದ್ಯಗಳಲ್ಲಿ ಅಜೇಯರಾಗಿರುವ ಮೇವೆದರ್ ಈಚೆಗಷ್ಟೇ ನಿವೃತ್ತಿ ಘೋಷಿಸಿದ್ದರು. ಅವರು ಅತ್ಯಂತ ಶ್ರೀಮಂತ ಬಾಕ್ಸರ್‌ಗಳಲ್ಲಿ ಒಬ್ಬರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.