ADVERTISEMENT

ಟೋಕಿಯೊದಲ್ಲಿ ಸೌಹಾರ್ದ ಜಿಮ್ನಾಸ್ಟಿಕ್‌ ಕೂಟ

ಟೋಕಿಯೊ ಒಲಿಂಪಿಕ್ಸ್ ಆಯೋಜನೆ ಸಾಧ್ಯವೆಂದು ನಿರೂಪಿಸುವ ಉದ್ದೇಶ

ಏಜೆನ್ಸೀಸ್
Published 8 ನವೆಂಬರ್ 2020, 14:23 IST
Last Updated 8 ನವೆಂಬರ್ 2020, 14:23 IST
ಬ್ಯಾಲನ್ಸ್ ಬೀಮ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಚೀನಾದ ಝೊ ರುಯಾ–ಎಎಫ್‌ಪಿ ಚಿತ್ರ
ಬ್ಯಾಲನ್ಸ್ ಬೀಮ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಚೀನಾದ ಝೊ ರುಯಾ–ಎಎಫ್‌ಪಿ ಚಿತ್ರ   

ಟೋಕಿಯೊ: ಈ ಬಾರಿಯ ಒಲಿಂಪಿಕ್ಸ್ ಆಯೋಜನೆ ಸಾಧ್ಯ ಎಂಬುದನ್ನು ನಿರೂಪಿಸುವ ಉದ್ದೇಶದಿಂದ ಟೋಕಿಯೊದಲ್ಲಿ ಭಾನುವಾರ ಒಂದು ದಿನದ ಸೌಹಾರ್ದ ಜಿಮ್ನಾಸ್ಟಿಕ್‌ ಕೂಟವನ್ನು ಏರ್ಪಡಿಸಲಾಗಿತ್ತು. ಕೆಲವು ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ರಷ್ಯಾ, ಚೀನಾ ಹಾಗೂ ಅಮೆರಿಕದ 22 ಅಥ್ಲೀಟ್‌ಗಳು ಪಾಲ್ಗೊಂಡಿದ್ದರು.

ಜಪಾನ್‌ನ ಎಂಟು ಜಿಮ್ನಾಸ್ಟಿಕ್‌ ಪಟುಗಳು ಕೂಡ ಇದರಲ್ಲಿ ಭಾಗವಹಿಸಿದ್ದರು. ಇಲ್ಲಿಯ ಬೇಸ್‌ಬಾಲ್‌ ಕ್ರೀಡಾಂಗಣದಲ್ಲಿ ಈ ಕೂಟ ನಡೆಯಿತು.

ಕೂಟಕ್ಕೆ ಅನ್ಯದೇಶಗಳಿಂದ ಆಗಮಿಸಿದ್ದ ಅಥ್ಲೀಟ್‌ಗಳಿಗೆ 14 ದಿನಗಳ ಕ್ವಾರಂಟೈನ್‌ ನಿಗದಿಪಡಿಸಲಾಗಿತ್ತು. ಹೊಟೇಲ್‌ಗಳಲ್ಲಿ ಪ್ರತ್ಯೇಕವಾಸದ ಅವಕಾಶ ಕಲ್ಪಿಸಲಾಗಿತ್ತು.

ADVERTISEMENT

ಇದೇ ವರ್ಷ ನಡೆಯಬೇಕಿದ್ದ ಒಲಿಂಪಿಕ್‌ ಕೂಟವನ್ನು 2021ರ ಜುಲೈಗೆ ಮುಂದೂಡಲಾಗಿದೆ. 206 ದೇಶ ಮತ್ತು ಪ್ರಾಂತ್ಯಗಳ 11,000 ಅಥ್ಲೀಟ್‌ಗಳು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಷ್ಟೇ ಅಲ್ಲದೆ 4,400ಕ್ಕೂ ಹೆಚ್ಚು ಪ್ಯಾರಾಲಿಂಪಿಕ್‌ ಸ್ಪರ್ಧಿಗಳು, ಸಾವಿರಕ್ಕೂ ಹೆಚ್ಚು ಅಧಿಕಾರಿಗಳು, ತೀರ್ಪುಗಾರರು, ಸುದ್ದಿ ಮಾಧ್ಯಮ ಹಾಗೂ ಪ್ರಾಯೋಜಕರು ಕೂಟದಲ್ಲಿ ಇರಲಿದ್ದಾರೆ.

ಜಪಾನೀಯರಲ್ಲದ ಸಾವಿರಾರು ಅಭಿಮಾನಿಗಳಿಗೆ ಒಲಿಂಪಿಕ್ಸ್ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆಯೇ ಅಥವಾ ಕ್ರೀಡಾಕೂಟವು ಕೇವಲ ಜಪಾನ್‌ ಪ್ರೇಕ್ಷಕರಿಗೆ ಮಾತ್ರವೇ ಎಂಬುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಈ ಕುರಿತು ಕೂಟದ ಸಂಘಟಕರು ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಕೆಲವು ಮಾಹಿತಿಗಳನ್ನು ನೀಡಿದೆಯಾದರೂ ಕೊರೊನಾ ಸೋಂಕಿಗೆ ಲಸಿಕೆ ಲಭ್ಯವಾಗುವವರೆಗೆ ಏನನ್ನೂ ಹೇಳಲಾಗದು ಎಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.