ADVERTISEMENT

ಜರ್ಮನಿಯ ಹಾನ್ ಗರಡಿಯಲ್ಲಿ ಪಳಗಿದ ಪ್ರತಿಭೆ ನೀರಜ್‌ ಚೋಪ್ರಾ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 6:23 IST
Last Updated 8 ಆಗಸ್ಟ್ 2021, 6:23 IST
ಯುವೆ ಹಾನ್‌ (ಕೆಂಪು ಪೋಷಾಕು) ಜೊತೆ ನೀರಜ್‌ ಚೋಪ್ರಾ –ಇನ್‌ಸ್ಟಾಗ್ರಾಂ ಚಿತ್ರ
ಯುವೆ ಹಾನ್‌ (ಕೆಂಪು ಪೋಷಾಕು) ಜೊತೆ ನೀರಜ್‌ ಚೋಪ್ರಾ –ಇನ್‌ಸ್ಟಾಗ್ರಾಂ ಚಿತ್ರ   

ಬೆಂಗಳೂರು: ನೀರಜ್‌ ಚೋಪ್ರಾ ಸಾಧನೆಯ ಶ್ರೇಯ ಅವರ ಕೋಚ್‌ ಯುವೆ ಹಾನ್‌ ಅವರಿಗೂ ಸಲ್ಲಬೇಕು.

ಜರ್ಮನಿಯ ಹಾನ್‌ 1984ರ ಜುಲೈ 20ರಂದು ನಡೆದಿದ್ದ ಕೂಟವೊಂದರಲ್ಲಿ 104.80 ಮೀಟರ್ಸ್‌ ದೂರ ಜಾವೆಲಿನ್‌ ಎಸೆದು ವಿಶ್ವ ದಾಖಲೆ ಬರೆದಿದ್ದರು. ಈವರೆಗೂ ಈ ದಾಖಲೆ ಮುರಿಯಲು ಯಾರಿಗೂ ಆಗಿಲ್ಲ.

1985ರಲ್ಲಿ ಕ್ಯಾನ್‌ಬೆರಾದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ96.96 ಮೀಟರ್ಸ್‌ ಸಾಮರ್ಥ್ಯ ತೋರಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು. 1982ರಲ್ಲಿ ಅಥೆನ್ಸ್‌ನಲ್ಲಿ ನಡೆದಿದ್ದ ಯುರೋಪಿಯನ್‌ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನಕ್ಕೆ ಮುತ್ತಿಟ್ಟಿದ್ದರು.

ADVERTISEMENT

ಹಾನ್‌ ಅವರು 2017ರ ನವೆಂಬರ್‌ನಲ್ಲಿ ಭಾರತ ಜಾವೆಲಿನ್‌ ಥ್ರೋ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದರು. ಅವರ ಮಾಸಿಕ ವೇತನ ₹5.9 ಲಕ್ಷ ಎಂದು ಹೇಳಲಾಗಿದೆ. ಒಲಿಂಪಿಕ್ಸ್‌ವರೆಗೂ ಮಾತ್ರ ಅವರೊಂದಿಗೆ ಎಎಫ್‌ಐ ಒಪ್ಪಂದ ಮಾಡಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.