ADVERTISEMENT

ಟೋಕಿಯೊ ಒಲಿಂಪಿಕ್ಸ್‌: ಕ್ರೀಡಾಜ್ಯೋತಿ ಬೆಳಗಿದ ನವೊಮಿ ಒಸಾಕ, ಅಧಿಕೃತ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 15:47 IST
Last Updated 23 ಜುಲೈ 2021, 15:47 IST
ಒಲಿಂಪಿಕ್‌ ಕ್ರೀಡಾಜ್ಯೋತಿ ಬೆಳಗಿಸಿದ ನವೊಮಿ ಒಸಾಕ (ಚಿತ್ರ: #Tokyo2020)
ಒಲಿಂಪಿಕ್‌ ಕ್ರೀಡಾಜ್ಯೋತಿ ಬೆಳಗಿಸಿದ ನವೊಮಿ ಒಸಾಕ (ಚಿತ್ರ: #Tokyo2020)   

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ಗೆ ಅಧಿಕೃತ ಚಾಲನೆ ಸಿಕ್ಕಿದೆ. ಜಪಾನ್‌ನ ಕ್ರೀಡಾಳು ನವೊಮಿ ಒಸಾಕ ಒಲಿಂಪಿಕ್‌ ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ಜಪಾನ್‌ ಸಾಮ್ರಾಟ ನಾರೂಹಿತೊ ಟೋಕಿಯೊ ಒಸಿಂಪಿಕ್ಸ್‌ಗೆ ಅಧಿಕೃತ ಚಾಲನೆ ನೀಡಿದರು.

ಒಲಿಂಪಿಕ್ಸ್‌ ಉದ್ಘಾಟನೆ ವೇಳೆ ನ್ಯಾಷನಲ್‌ ಸ್ಟೇಡಿಯಂನಲ್ಲಿ 6 ಭಾರಿ ವಿಶ್ವಚಾಂಪಿಯನ್‌ ಮೇರಿ ಕೋಮ್‌ ಮತ್ತು ಭಾರತದ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ನೇತೃತ್ವದಲ್ಲಿ ಭಾರತೀಯ ಕ್ರೀಡಾಪಟುಗಳು ಪಥಸಂಚನ ನಡೆಸಿದರು.

ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು, ಕುಸ್ತಿಪಟು ಬಜರಂಗ್‌ ಪುನಿಯಾ, ಮಹಿಳಾ ಕುಸ್ತಿಪಟು ವಿನೇಶಾ ಪೋಗಟ್‌, ಬಾಕ್ಸರ್‌ ಅಮಿತ್‌ ಪಂಗಲ್‌, ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು,ಶೂಟಿಂಗ್‌ ಸ್ಪರ್ಧಿಗಳಾದ ಮನು ಭಾಕರ್‌ ಮತ್ತು ಸೌರಭ್‌ ಚೌಧರಿ ಜೋಡಿ, ಜಾವೆಲಿನ್‌ ಥ್ರೋ ಪಟು ನೀರಜ್‌ ಚೋಪ್ರಾ ಟೋರಿಯೊ ಒಲಿಂಪಿಕ್ಸ್‌ ಅಂಗಣದಲ್ಲಿರುವಭಾರತದ ಭರವಸೆ ಕ್ರೀಡಾಪಟುಗಳಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.