ADVERTISEMENT

Tokyo Olympics ಕುಸ್ತಿ: 19 ವರ್ಷದ ಅನ್ಶು ಮಲಿಕ್‌ಗೆ ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2021, 5:14 IST
Last Updated 4 ಆಗಸ್ಟ್ 2021, 5:14 IST
ಅನ್ಶು ಮಲಿಕ್ (ಸಂಗ್ರಹ ಚಿತ್ರ)
ಅನ್ಶು ಮಲಿಕ್ (ಸಂಗ್ರಹ ಚಿತ್ರ)   

ಚಿಬಾ (ಜಪಾನ್): ಟೋಕಿಯೊ ಒಲಿಂಪಿಕ್ಸ್‌ನ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಭಾರತದ ಅನ್ಶು ಮಲಿಕ್, ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿನ ಆಘಾತ ಎದುರಿಸಿದ್ದಾರೆ.

ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ ಅನ್ಶು, ಯುರೋಪಿನ ಚಾಂಪಿಯನ್ ಬೆಲರೂಸ್‌ನ ಐರಿನಾ ಕುರಾಚಿಕಿನಾ ವಿರುದ್ಧ 2-8ರ ಅಂತರದಲ್ಲಿ ಸೋಲು ಅನುಭವಿಸಿದರು.

19 ವರ್ಷದ ಏಷ್ಯನ್ ಚಾಂಪಿಯನ್ ಅನ್ಶು, 0-4ರಲ್ಲಿ ಹಿನ್ನಡೆ ಅನುಭವಿಸಿದರೂ ದಿಟ್ಟ ಹೋರಾಟ ಪ್ರದರ್ಶಿಸಿದರು. ಆದರೆ ಅನುಭವಿ ಕುಸ್ತಿ ಸ್ಪರ್ಧಿಯ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ.

ಹಾಗೊಂದು ವೇಳೆ ಬೆಲರೂಸ್‌ನ ಕುಸ್ತಿಪಟು ಫೈನಲ್‌ಗೆ ಪ್ರವೇಶಿಸಿದರೆ ಅನ್ಶುಗೆ ಮಗದೊಂದು ಅವಕಾಶ ತೆರೆದುಕೊಳ್ಳಲಿದೆ. ಅಲ್ಲದೆ ರಿಪೇಚ್ ಸುತ್ತಿನಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.