ADVERTISEMENT

PHOTOS | 'ಲವ್ಲಿ ಲವ್ಲಿನಾ'; ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 2ನೇ ಪದಕ ಖಾತ್ರಿ

ಟೋಕಿಯೊ ಒಲಿಂಪಿಕ್ಸ್ ಮಹಿಳೆಯರ ಬಾಕ್ಸಿಂಗ್ ವೆಲ್ಟರ್‌ವೇಟ್ (69 ಕೆ.ಜಿ) ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿರುವ ಭಾರತದ ಯುವ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದಾರೆ. ಇದರೊಂದಿಗೆ ಮಹಾಕ್ರೀಡಾಕೂಟದಲ್ಲಿ ಭಾರತ ಎರಡು ಪದಕಗಳನ್ನು ಗೆದ್ದಂತಾಗಿದೆ. ಈ ಮೊದಲು ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದರು.

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 5:29 IST
Last Updated 30 ಜುಲೈ 2021, 5:29 IST
ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಲವ್ಲಿನಾ ಬೊರ್ಗೊಹೈನ್ ಗೆಲುವಿನ ಸಂಭ್ರಮ
ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಲವ್ಲಿನಾ ಬೊರ್ಗೊಹೈನ್ ಗೆಲುವಿನ ಸಂಭ್ರಮ   
ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾ ತೈಪೆಯ ಚಿನ್ ಚೆನ್ ವಿರುದ್ಧ 4-1ರ ಅಂತರದ ಗೆಲುವು
ಮೇರಿ ಕೋಮ್ ಹಾಗೂ ವಿಜೇಂದರ್ ಸಿಂಗ್ ಸಾಲಿಗೆ ಲವ್ಲಿನಾ ಬೊರ್ಗೊಹೈನ್
ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ 2008ರಲ್ಲಿ ವಿಜೇಂದರ್ ಹಾಗೂ 2012ರಲ್ಲಿ ಮೇರಿ ಕಂಚಿನ ಪದಕ ಗೆದ್ದಿದ್ದರು.
ದೇಶದ ಕೀರ್ತಿ ಪತಾಕೆ ಹಾರಿಸಿದ ಅಸ್ಸಾಂ ಮೂಲದ 23ರ ಹರೆಯದ ಲವ್ಲಿನಾ
ರಿಯೋ ಒಲಿಂಪಿಕ್ಸ್ ಸಾಧನೆ ಸರಿಗಟ್ಟಿದ ಭಾರತ
ನಾರಿಶಕ್ತಿಯ ಪ್ರತೀಕ ಲವ್ಲಿನಾ ಬೊರ್ಗೊಹೈನ್
ಲವ್ಲಿನಾ ಬೊರ್ಗೊಹೈನ್ ನಿಖರ ಪಂಚ್
ಇನ್ನೊಂದು ಪಂದ್ಯ ಗೆದ್ದರೆ ಚಿನ್ನ ಪದಕಕ್ಕೆ ಸೆಣಸಲಿದ್ದಾರೆ.
ಕಳೆದ ವರ್ಷ ಕೋವಿಡ್‌ನಿಂದಾಗಿ ಯುರೋಪ್‌ನಲ್ಲಿ ತರಬೇತಿ ಅವಕಾಶವನ್ನು ಕಳೆದುಕೊಂಡಿರುವ ಲವ್ಲಿನಾ ಸಾಧನೆಗೆ ಅದ್ಯಾವುದೂ ಅಡ್ಡಿಯಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.