ADVERTISEMENT

Tokyo Olympics ಟೇಬಲ್ ಟೆನಿಸ್ | ಸುತೀರ್ಥಾ ಮುಖರ್ಜಿ ಹೋರಾಟ ಅಂತ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2021, 4:59 IST
Last Updated 26 ಜುಲೈ 2021, 4:59 IST
ಸುತೀರ್ಥಾ ಮುಖರ್ಜಿ
ಸುತೀರ್ಥಾ ಮುಖರ್ಜಿ   

ಟೋಕಿಯೊ: ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಸುತೀರ್ಥಾ ಮುಖರ್ಜಿ ಹೋರಾಟ ಅಂತ್ಯಗೊಂಡಿದೆ.

ಸೋಮವಾರ ನಡೆದ ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿನ ಹೋರಾಟದಲ್ಲಿ ಸುತೀರ್ಥಾ ಅವರು ಪೋರ್ಚಗಲ್‌ನ 42 ವರ್ಷದ ಹಿರಿಯ ಅನುಭವಿ ಆಟಗಾರ್ತಿ ಯೂ ಫೂ ವಿರುದ್ಧ 3-11 3-11 5-11 5-11ರಲ್ಲಿ ಸೋಲು ಅನುಭವಿಸಿದರು.

ಮೊದಲ ಸುತ್ತಿನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿರುವ ವಿಶ್ವ ನಂ. 98 ರ‍್ಯಾಂಕ್‌ನ ಸುತೀರ್ಥಾ ಅವರಿಂದ ಶ್ರೇಷ್ಠ ಪ್ರದರ್ಶನ ಮೂಡಿಬಂದಿಲ್ಲ. 23 ನಿಮಿಷಗಳ ಹೋರಾಟದ ಅಂತ್ಯದಲ್ಲಿ ವಿಶ್ವದ 55ನೇ ರ‍್ಯಾಂಕ್‌ ಆಟಗಾರ್ತಿ ವಿರುದ್ಧ ಪರಾಭವಗೊಂಡರು.

ಅತ್ತ ಮಹಿಳಾ ಹಾಗೂ ಪುರುಷ ಸಿಂಗಲ್ಸ್ ವಿಭಾಗದಲ್ಲಿ ಅನುಕ್ರಮವಾಗಿ ಮಣಿಕಾ ಬಾತ್ರಾ ಹಾಗೂ ಶರತ್ ಕಮಲ್ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಆದರೆ ಕಳೆದ ದಿನವೇ ಜಿ. ಸತ್ಯನ್ ಸೋಲಿಗೆ ಶರಣಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.