ADVERTISEMENT

Tokyo Olympics: ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆಯಲ್ಲಿ ಜಾದೂ ಮಾಡಿದ ಜಪಾನ್‌

ರಾಯಿಟರ್ಸ್
Published 6 ಆಗಸ್ಟ್ 2021, 18:53 IST
Last Updated 6 ಆಗಸ್ಟ್ 2021, 18:53 IST
ಜಪಾನ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ನ ಗ್ಯಾಬ್ರಿಲಾ ವಿಲಿಯಮ್ಸ್‌ (ಮಧ್ಯ) ಚೆಂಡನ್ನು ಬ್ಯಾಸ್ಕೆಟ್‌ ಮಾಡಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ
ಜಪಾನ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ನ ಗ್ಯಾಬ್ರಿಲಾ ವಿಲಿಯಮ್ಸ್‌ (ಮಧ್ಯ) ಚೆಂಡನ್ನು ಬ್ಯಾಸ್ಕೆಟ್‌ ಮಾಡಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ   

ಸಾಯ್‌ತಮಾ: ಜಪಾನ್‌ ಮಹಿಳಾ ತಂಡದವರು ಒಲಿಂಪಿಕ್ಸ್‌ನ ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆಯಲ್ಲಿ ಚೊಚ್ಚಲ ಬಾರಿಗೆ ಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಜಪಾನ್‌ 87–71 ಪಾಯಿಂಟ್ಸ್‌ನಿಂದ ಫ್ರಾನ್ಸ್‌ ತಂಡವನ್ನು ಪರಾಭವಗೊಳಿಸಿತು.

ಮೊದಲ ಕ್ವಾರ್ಟರ್‌ನಲ್ಲಿ 14–22ರಿಂದ ಹಿನ್ನಡೆ ಕಂಡಿದ್ದ ಜಪಾನ್‌ ಆಟಗಾರ್ತಿಯರು ಎರಡು ಮತ್ತು ಮೂರನೇ ಕ್ವಾರ್ಟರ್‌ಗಳಲ್ಲಿ ಪ್ರಾಬಲ್ಯ ಮೆರೆದರು. ಅಂತಿಮ ಕ್ವಾರ್ಟರ್‌ನಲ್ಲಿ ಫ್ರಾನ್ಸ್‌ ತಂಡ 21 ಪಾಯಿಂಟ್ಸ್‌ ಕಲೆಹಾಕಿದರೂ ಗೆಲುವು ದಕ್ಕಲಿಲ್ಲ.

ADVERTISEMENT

ಭಾನುವಾರ ನಡೆಯುವ ಫೈನಲ್‌ ಪೈಪೋಟಿಯಲ್ಲಿ ಜಪಾನ್‌ ತಂಡಕ್ಕ ಬಲಿಷ್ಠ ಅಮೆರಿಕ ಸವಾಲು ಎದುರಾಗಲಿದೆ.

ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಅಮೆರಿಕ 79–59 ಪಾಯಿಂಟ್ಸ್‌ನಿಂದ ಸರ್ಬಿಯಾ ತಂಡವನ್ನು ಸೋಲಿಸಿತು. ಇದರೊಂದಿಗೆ ಸತತ ಏಳನೇ ಬಾರಿ ಒಲಿಂಪಿಕ್ಸ್‌ನಲ್ಲಿ ಫೈನಲ್‌ ತಲುಪಿದ ಸಾಧನೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.