ADVERTISEMENT

Paris Olympics 2024: ಐದನೇ ಪದಕ ಪಡೆದ ಬ್ರಿಟನ್‌ನ ಟಾಮ್‌ ಡೇಲಿ

ಸಿಂಕ್ರನೈಸ್ಡ್‌ ಪ್ಲಾಟ್‌ಫಾರ್ಮ್ ಡೈವಿಂಗ್‌: ಚೀನಾಕ್ಕೆ ಚಿನ್ನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 13:17 IST
Last Updated 29 ಜುಲೈ 2024, 13:17 IST
<div class="paragraphs"><p>ಟಾಮ್‌ ಡೇಲಿ ಹಾಗೂ&nbsp;ನೋವಾ ವಿಲಿಯಮ್ಸ್‌</p></div>

ಟಾಮ್‌ ಡೇಲಿ ಹಾಗೂ ನೋವಾ ವಿಲಿಯಮ್ಸ್‌

   

(x ಚಿತ್ರ)

ಪ್ಯಾರಿಸ್‌: ಬ್ರಿಟನ್‌ನ ಟಾಮ್‌ ಡೇಲಿ ಅವರು ದೀರ್ಘಕಾಲದ ಒಲಿಂಪಿಕ್‌ ಚಾಂಪಿಯನ್ ಪಟ್ಟ ಕಳೆದುಕೊಂಡರು. ಆದರೆ ಅವರು ಒಲಿಂಪಿಕ್ಸ್‌ನ ಕ್ರೀಡೆಗಳ ಪುರುಷರ 10 ಮೀ. ಸಿಂಕ್ರನೈಸ್ಡ್‌ (ಲಯಬದ್ಧ) ಪ್ಲಾಟ್‌ಫಾರ್ಮ್‌ ಡೈವಿಂಗ್‌ನಲ್ಲಿ ತಮ್ಮ ಐದನೇ ಪದಕವನ್ನು ಬೆಳ್ಳಿ ರೂಪದಲ್ಲಿ ಜೊತೆಗಾರ ನೋವಾ ವಿಲಿಯಮ್ಸ್‌ ಜೊತೆ ಗೆದ್ದುಕೊಂಡರು.

ADVERTISEMENT

ಈ ಸ್ಪರ್ಧೆಯಲ್ಲಿ ಚೀನಾದ ಲಿಯಾನ್‌ ಜುನ್‌ಜೀ ಮತ್ತು ಯಾಂಗ್ ಹಾವೊ ಅವರು ಚಿನ್ನ ಗೆದ್ದುಕೊಂಡರು. 30 ವರ್ಷ ವಯಸ್ಸಿನ ಡೇಲಿ ಅವರಿಗೆ ಐದು ಒಲಿಂಪಿಕ್ಸ್‌ಗಳಲ್ಲಿ ಇದು ಐದನೇ ಪದಕ. ಮೂರು ವರ್ಷಗಳ ಹಿಂದೆ ಟೋಕಿಯೊ ಕ್ರೀಡೆಗಳಲ್ಲಿ ಅವರು ಮ್ಯಾಟಿ ಲೀ ಜೊತೆಗೂಡಿ ಇದೇ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು.

ಕೊನೆಯ ಮೂರು ವಿಶ್ವ ಚಾಪಿಯನ್‌ಷಿಪ್‌ಗಳನ್ನು ಗೆದ್ದುಕೊಂಡಿರುವ ಲಿಯಾನ್ ಮತ್ತು ಯಾಂಗ್ ಮೊದಲ ಡೈವ್‌ನಿಂದಲೇ ಮೇಲುಗೈ ಸಂಪಾದಿಸಿದರು. ಅವರು ನಂತರ ಮುನ್ನಡೆ ಬಿಟ್ಟುಕೊಡಲೇ ಇಲ್ಲ.

ಚೀನಾದ ಜೋಡಿ 490.35 ಸ್ಕೋರ್‌ ಗಳಿಸಿ ಚಿನ್ನ ಗೆದ್ದರೆ, ಡೇಲಿ– ವಿಲಿಯಮ್ಸ್ ಅವರು 463.44 ಸ್ಕೋರ್‌ನೊಡನೆ ಬೆಳ್ಳಿ ಹಾಗೂ ಕೆನಡಾದ ರೈಲಾನ್ ವೀನ್ಸ್– ನಥಾನ್ ಝೋಂಬರ್ ಮರ್ರೆ 422.13 ಸ್ಕೋರ್‌ನೊಡನೆ ಕಂಚಿನ ಪದಕ ತಮ್ಮದಾಗಿಸಿಕೊಂಡರು.

2008ರ ಬೀಜಿಂಗ್‌ ಕ್ರೀಡೆಗಳಲ್ಲಿ ಡೇಲಿ ಅವರು ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ್ದರು. ಈ ಬಾರಿ ಬ್ರಿಟನ್‌ ತಂಡದ ಧ್ವಜದಾರಿಗಳಲ್ಲಿ ಅವರೂ ಒಬ್ಬರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.