ADVERTISEMENT

ಒಲಿಂಪಿಕ್ಸ್‌ನಲ್ಲಿ ಸತತ ಎರಡು ಬಾರಿ ಶೂಟಿಂಗ್‌ನಲ್ಲಿ 'ಶೂನ್ಯ' ಸಂಪಾದನೆ

ಪಿಟಿಐ
Published 2 ಆಗಸ್ಟ್ 2021, 8:59 IST
Last Updated 2 ಆಗಸ್ಟ್ 2021, 8:59 IST
ಸಂವೀವ್ ರಜಪೂತ್
ಸಂವೀವ್ ರಜಪೂತ್   

ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಒಲಿಂಪಿಕ್ಸ್‌ನಲ್ಲಿ ಭಾರತೀಯ ಶೂಟರ್‌ಗಳ ಸಾಲು ಸಾಲು ವೈಫಲ್ಯ ಮುಂದುವರಿದಿದೆ. ಭಾರತದ ಕೊನೆಯ ಭರವಸೆಯಾಗಿದ್ದ ಸಂಜೀವ್ ರಜಪೂತ್ ಹಾಗೂ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಫೈನಲ್‌ಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ. ಇದರೊಂದಿಗೆ ಪದಕದ ಆಸೆ ಕಮರಿದೆ.

ಅಸಕಾ ರೇಂಜ್‌ನಲ್ಲಿ ಸೋಮವಾರ ನಡೆದ ಪುರುಷರ 50 ಮೀಟರ್ ರೈಫಲ್ 3 ಪೋಸಿಷನ್ಸ್ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಸಂಜೀವ್ ರಜಪೂತ್ ಕ್ರಮವಾಗಿ 21 ಹಾಗೂ 32ನೇ ಸ್ಥಾನ ಗಳಿಸಿದರು.

ಅಗ್ರ ಎಂಟು ಸ್ಥಾನಗಳನ್ನು ಪಡೆದ ಶೂಟರ್‌ಗಳು ಫೈನಲ್‌ಗೆ ತೇರ್ಗಡೆಯನ್ನು ಹೊಂದಿದ್ದಾರೆ.

ಇದರೊಂದಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸತತ ಎರಡನೇ ಬಾರಿಗೆ ಭಾರತೀಯ ಶೂಟರ್‌ಗಳು ಬರಿಗೈಯಲ್ಲಿ ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.