ADVERTISEMENT

Paris Olympics | ಟ್ರಯಥ್ಲಾನ್‌: ಈಜು ಅಭ್ಯಾಸ ಮತ್ತೆ ರದ್ದು

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 13:16 IST
Last Updated 29 ಜುಲೈ 2024, 13:16 IST
   

ಪ್ಯಾರಿಸ್‌: ಸೆನ್‌ ನದಿಯ ನೀರಿನ ಗುಣಮಟ್ಟ ಕಳವಳಕ್ಕೆ ಕಾರಣವಾಗಿದ್ದು, ನದಿಯಲ್ಲಿ ಸೋಮವಾರ ಬೆಳಿಗ್ಗೆ ನಡೆಯಬೇಕಾಗಿದ್ದ ಟ್ರಯಥ್ಲಾನ್‌ನ ಈಜು ಅಭ್ಯಾಸವನ್ನು ಅಧಿಕಾರಿಗಳು ರದ್ದುಗೊಳಿಸಿದರು. ಭಾನುವಾರವೂ ಈಜು ಅಭ್ಯಾಸ ರದ್ದುಗೊಳಿಸಲಾಗಿತ್ತು.

ಸ್ಪರ್ಧಿಗಳಿಗೆ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲು ಅನುಕೂಲವಾಗುವಂತೆ ಈಜು ಅಭ್ಯಾಸಕ್ಕೆ ಅವಕಾಶ ಕಲ್ಪಿಸಲು ಅಧಿಕಾರಿಗಳು ಮುಂದಾಗಿದ್ದರು.

ಮಂಗಳವಾರ ಸ್ಪರ್ಧೆಗಳು ಆರಂಭವಾಗುವ ಸಮಯಕ್ಕೆ ನದಿಯ ನೀರಿನ ಗುಣಮಟ್ಟ ಸಹಜ ಸ್ಥಿತಿಗೆ ಮರಳಲಿದೆ ಎಂಬ ವಿಶ್ವಾಸ ಆಯೋಜಕರದ್ದು.

ADVERTISEMENT

ಬಿಸಿಲು ಮತ್ತು ತಾಪಮಾನ ಏರಿಕೆಯಾಗಿ ನೀರು ತಿಳಿಗೊಳ್ಳಬಹುದು ಎಂಬ ವಿಶ್ವಾಸದಲ್ಲಿ ವಿಶ್ವ ಟ್ರಯಥ್ಲಾನ್‌ ಮತ್ತು ಅದರ ವೈದ್ಯಕೀಯ ತಂಡ, ನಗರದ ಅಧಿಕಾರಿಗಳು ಇದ್ದಾರೆ.

ನೀರಿನ ಗುಣಮಟ್ಟ ಯೋಗ್ಯವಾಗಿಲ್ಲದ ಕಾರಣ ಶತಮಾನಕ್ಕೂ ಹೆಚ್ಚಿನ ಸಮಯದಿಂದ ಈ ನದಿಯಲ್ಲಿ ಈಜುವುದನ್ನು ನಿಷೇಧಿಸಲಾಗಿತ್ತು. ಆದರೆ ಒಲಿಂಪಿಕ್ಸ್‌ ಕ್ರೀಡೆಗಳ ಉದ್ಘಾಟನಾ ಸಮಾರಂಭ, ಈಜು ಸ್ಪರ್ಧೆ ನಡೆಸುವ ಉದ್ದೇಶದಿಂದ ನದಿಯನ್ನು ಸ್ವಚ್ಛಗೊಳಿಸಲು ಆಯೋಜಕರು ನೂರಾರು ಕೋಟಿ ಹಣವನ್ನು ವೆಚ್ಚ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.