ADVERTISEMENT

ಒಳಾಂಗಣ ಅಥ್ಲೆಟಿಕ್ಸ್: ಟ್ರಿಪಲ್ ಜಂಪ್‌ನಲ್ಲಿ ಭಾರತದ ಚಿತ್ರವೇಲ್‌ಗೆ 11ನೇ ಸ್ಥಾನ

ಪಿಟಿಐ
Published 3 ಮಾರ್ಚ್ 2024, 15:54 IST
Last Updated 3 ಮಾರ್ಚ್ 2024, 15:54 IST
ಪ್ರವೀಣ್ ಚಿತ್ರವೇಲ್
ಪ್ರವೀಣ್ ಚಿತ್ರವೇಲ್   

ಗ್ಲಾಸ್ಗೋ: ಭಾರತದ ಪ್ರವೀಣ್ ಚಿತ್ರವೇಲ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಒಳಾಂಗಣ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ 16.45 ಮೀ ದೂರ ಜಿಗಿದು 11ನೇ ಸ್ಥಾನ ಪಡೆದರು. 

ಎಮಿರೇಟ್ಸ್ ಅರೆನಾದಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ 22 ವರ್ಷದ ಪ್ರವೀಣ್‌ ಮೊದಲ ಪ್ರಯತ್ನದಲ್ಲಿ 15.76 ಮೀಟರ್‌ ಜಿಗಿದರು. ನಂತರದ ಪ್ರಯತ್ನದಲ್ಲಿ ಕ್ರಮವಾಗಿ 16.29 ಮೀ. ಮತ್ತು 16.45 ಮೀ. ಸಾಧನೆ ಮಾಡಿದರು. ಅವರು 17.37 ಮೀ. ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ.

ಕಳೆದ ವರ್ಷ ಚೀನಾದ ಹಾಂಗ್‌ಝೌನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ 16.68 ಮೀ ಜಿಗಿತದೊಂದಿಗೆ ಪ್ರವೀಣ್‌ ಕಂಚು ಗೆದ್ದಿದ್ದರು.

ADVERTISEMENT

ಬುರ್ಕಿನಾಬೆಯ ಅಥ್ಲೀಟ್ ಹ್ಯೂಗ್ಸ್ ಫ್ಯಾಬ್ರಿಸ್ ಜಾಂಗೊ (17.53 ಮೀ) ಚಿನ್ನ ಗೆದ್ದರೆ, ಅಲ್ಜೀರಿಯಾದ ಯಾಸರ್ ಮೊಹಮ್ಮದ್ ಟ್ರಿಕಿ (17.35 ಮೀ) ಮತ್ತು ಪೋರ್ಚುಗಲ್‌ನ ಟಿಯಾಗೊ ಪೆರೇರಾ (17.08 ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ತನ್ನದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.