
ಪ್ರಜಾವಾಣಿ ವಾರ್ತೆ
ಅಥರ್ವ ನವರಂಗೆ, ತನಿಷ್ಕಾ ಕಾಲಭೈರವ
ಬೆಂಗಳೂರು: ಕರ್ನಾಟಕದ ಅಥರ್ವ ನವರಂಗೆ ಮತ್ತು ತನಿಷ್ಕಾ ಕಾಲಭೈರವ ಅವರು ರಾಂಚಿಯಲ್ಲಿ ನಡೆದ ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 17 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದರು.
15 ವರ್ಷದ ಅಥರ್ವ ಸೆಮಿ ಫೈನಲ್‌ನಲ್ಲಿ 1–3ರಿಂದ ಒಡಿಶಾದ ಸಾರ್ಥಕ್ ಅವರಿಗೆ ಮಣಿದು, ಕಂಚಿನ ಪದಕದೊಂದಿಗೆ ಅಭಿಯಾನ ಮುಗಿಸಿದರು. ಕಾರ್ಟರ್ ಫೈನಲ್‌ನಲ್ಲಿ ಅಥರ್ವ 3-1ರಿಂದ ರೈಲ್ವೆಯ ರೊನಾಲ್ಡ್ ಶಂಕರ್ ಅವರನ್ನು ಮಣಿಸಿದ್ದರು.
14 ವರ್ಷದ ತನಿಷ್ಕಾ ನಾಲ್ಕರ ಘಟ್ಟದ ಪಂದ್ಯದಲ್ಲಿ 1-3 ರಿಂದ ಪಶ್ಚಿಮ ಬಂಗಾಳದ ಸಿಂಡ್ರೆಲಾ ವಿರುದ್ಧ ಸೋತು, ಕಂಚಿನ ಪದಕ ತಮ್ಮದಾಗಿಸಿ ಕೊಂಡರು. ಕ್ವಾರ್ಟರ್ ಫೈನಲ್‌ನಲ್ಲಿ ತನಿಷ್ಕಾ 3–1ರಿಂದ ಪಶ್ಚಿಮ ಬಂಗಾಳದ ಮತ್ತೊಬ್ಬ ಅಂಕೋಲಿಕಾ ಚಕ್ರವರ್ತಿ ಅವರನ್ನು ಸೋಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.