ADVERTISEMENT

ಗಾಲ್ಫ್‌: ತ್ವೇಸಾ ಮಲಿಕ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 15:31 IST
Last Updated 14 ಜುಲೈ 2023, 15:31 IST
ಪ್ರಶಸ್ತಿಯೊಂದಿಗೆ ತ್ವೇಸಾ ಮಲಿಕ್ –ಪ್ರಜಾವಾಣಿ ಚಿತ್ರ
ಪ್ರಶಸ್ತಿಯೊಂದಿಗೆ ತ್ವೇಸಾ ಮಲಿಕ್ –ಪ್ರಜಾವಾಣಿ ಚಿತ್ರ   

ಬೆಂಗಳೂರು: ತ್ವೇಸಾ ಮಲಿಕ್‌ ಅವರು ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌ 11ನೇ ಲೆಗ್‌ನ ಟೂರ್ನಿಯನ್ನು ಗೆದ್ದುಕೊಂಡರು.

ಬೆಂಗಳೂರು ಗಾಲ್ಫ್‌ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಕೊನೆಯ ಸುತ್ತಿನ ಸ್ಪರ್ಧೆಯನ್ನು ಅವರು 64 ಸ್ಟ್ರೋಕ್‌ಗಳೊಂದಿಗೆ (3 ಅಂಡರ್‌) ಕೊನೆಗೊಳಿಸಿದರು. ಮೂರು ಸುತ್ತುಗಳಲ್ಲಿ ಒಟ್ಟು 202 ಸ್ಟ್ರೋಕ್‌ಗಳೊಂದಿಗೆ (1 ಓವರ್) ಅಗ್ರಸ್ಥಾನ ಪಡೆದರು.

ತ್ವೇಸಾ ಅವರು ಹೀರೊ ಮಹಿಳಾ ಪ್ರೊ ಗಾಲ್ಫ್‌ ಟೂರ್‌ನ ಕೊನೆಯ ಪ್ರಶಸ್ತಿಯನ್ನು 2021ರ ಮಾರ್ಚ್‌ನಲ್ಲಿ ಜಯಿಸಿದ್ದರು. ಈ ಋತುವಿನಲ್ಲಿ ಅವರು ಗೆದ್ದ ಮೊದಲ ಪ್ರಶಸ್ತಿ ಇದು.

ADVERTISEMENT

ಬೆಂಗಳೂರಿನ ದುರ್ಗಾ ನಿಟ್ಟೂರ್ (205) ಅವರು ಎರಡನೇ ಸ್ಥಾನ ಪಡೆದರೆ, ಸ್ನೇಹಾ ಸಿಂಗ್ (207) ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.