ADVERTISEMENT

ಭಾರತಕ್ಕೆ ಮಲೇಷ್ಯಾ ಸವಾಲು: ಜೋಹರ್ ಕಪ್ ಹಾಕಿ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 19:15 IST
Last Updated 21 ಅಕ್ಟೋಬರ್ 2022, 19:15 IST
   

ಜೊಹರ್‌ಬಹ್ರು, ಮಲೇಷ್ಯಾ: ಭಾರತ ಯುವ ಹಾಕಿ ತಂಡವು ಶನಿವಾರ ಇಲ್ಲಿ ಆರಂಭವಾಗಲಿರುವ ಸುಲ್ತಾನ್ ಆಫ್‌ ಜೋಹರ್ ಕಪ್ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ನಿರೀಕ್ಷೆಯಲ್ಲಿದೆ.

21 ವರ್ಷದೊಳಗಿನ ಪುರುಷರ ಈ ಟೂರ್ನಿಯಲ್ಲಿ ಭಾರತವು ಎರಡು ಬಾರಿ ಚಾಂಪಿಯನ್ (2013 ಹಾಗೂ 2014) ಆಗಿತ್ತು. 2012, 2015, 2018 ಹಾಗೂ 2019ರಲ್ಲಿ ರನ್ನರ್ಸ್ ಅಪ್ ಆಗಿತ್ತು. 2011 ಹಾಗೂ 2016ರಲ್ಲಿ ಬಿಟ್ಟರೆ ಉಳಿದ ಟೂರ್ನಿಗಳಲ್ಲಿ ಭಾರತವು ಪದಕ ಜಯಿಸಿದೆ.

ಕೋವಿಡ್–19 ಸೃಷ್ಟಿಸಿದ್ದ ಬಿಕ್ಕಟ್ಟಿನಿಂದಾಗಿ 2020 ಹಾಗೂ 2021ರಲ್ಲಿ ಟೂರ್ನಿ ನಡೆದಿರಲಿಲ್ಲ. ಹಾಕಿ ಆಡುವ ದೇಶಗಳ ಸೀನಿಯರ್ ತಂಡಗಳಿಗೆ ಪ್ರತಿಭಾಶೋಧದ ವೇದಿಕೆಯಾಗಿರುವ ಈ ಟೂರ್ನಿಯು ಮಹತ್ವದ್ದಾಗಿದೆ.

ADVERTISEMENT

ಭಾರತ ತಂಡವನ್ನು ಉತ್ತಮ್ ಸಿಂಗ್ ಮುನ್ನಡೆಸಲಿದ್ದಾರೆ. ಮೊದಲ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾವನ್ನು ಎದುರಿಸಲಿದೆ. ಹೋದ ವರ್ಷ ನಡೆದ ಜೂನಿಯರ್ ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸಿದ್ದ ತಂಡದ ಬಹುತೇಕ ಆಟಗಾರರು ಈ ಬಾರಿ ಇದ್ದಾರೆ. ಆದ್ದರಿಂದ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿದೆ.

ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ (ಅ. 23), ಜಪಾನ್ (ಅ. 25), ಆಸ್ಟ್ರೇಲಿಯಾ (ಅ.26) ಹಾಗೂ ಗ್ರೇಟ್ ಬ್ರಿಟನ್ (ಅ.28) ಎದುರು ಭಾರತವು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.