ADVERTISEMENT

ಯು ಮುಂಬಾಕ್ಕೆ ನಾಯಕರಾಗಿ ಸುರೀಂದರ್‌ ಸಿಂಗ್‌ ಮುಂದುವರಿಕೆ

ಪಿಟಿಐ
Published 29 ನವೆಂಬರ್ 2023, 16:41 IST
Last Updated 29 ನವೆಂಬರ್ 2023, 16:41 IST
ಸುರೀಂದರ್‌ ಸಿಂಗ್‌
ಸುರೀಂದರ್‌ ಸಿಂಗ್‌   

ಮುಂಬೈ: ಸುರೀಂದರ್ ಸಿಂಗ್ ಅವರನ್ನು ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಗೆ ಯು ಮುಂಬಾ ತಂಡ ನಾಯಕರನ್ನಾಗಿ ಉಳಿಸಿಕೊಂಡಿದೆ.

ಬುಧವಾರ ತಂಡದ ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ಇದೇ ವೇಳೆ ಉಪನಾಯಕರಾಗಿ ರಿಂಕು ಶರ್ಮಾ ಮತ್ತು ಮಹೇಂದರ್ ಸಿಂಗ್ ಅವರನ್ನು ಘೋಷಿಸಲಾಯಿತು.

ಗಿರೀಶ್ ಎರ್ನಾಕ್ ಅವರನ್ನು ‘ಸ್ಪಿರಿಟ್ ಆಫ್ ಮುಂಬಾ ಕ್ಯಾಪ್ಟನ್’ ಶೀರ್ಷಿಕೆಯೊಂದಿಗೆ ಸ್ಥಳೀಯ (ಮುಂಬೈ) ಐಕಾನ್ ಆಟಗಾರ ಎಂದು ಘೋಷಿಸಲಾಗಿದೆ. ಅವರಿಗೆ ತಂಡದಲ್ಲಿರುವ ದೇಶದ ವಿವಿಧ ಭಾಗಗಳ ಯುವ ಪ್ರತಿಭೆಗಳನ್ನು ಪೋಷಿಸುವ ಕಾರ್ಯವನ್ನು ನಿಯೋಜಿಸಲಾಗಿದೆ' ಎಂದು ಫ್ರಾಂಚೈಸಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.