ಬೆಂಗಳೂರು: ರೈಸಿಂಗ್ ಸ್ಟಾರ್ ಹಾಕಿ ಕ್ಲಬ್ ತಂಡವು ಎಫ್‌ಎಂಕೆಎಂಸಿ ಹಾಕಿ ಅರೇನಾದಲ್ಲಿ ನಡೆದ 16 ವರ್ಷದೊಳಗಿನವರ ಹಾಕಿ ಕರ್ನಾಟಕ ಸೆವೆನ್ಸ್ ಟೂರ್ನಿಯ ಬಾಲಕರ ವಿಭಾಗದಲ್ಲಿ ಪ್ರಶಸ್ತಿಯನ್ನು ಜಯಿಸಿತು.
ಬುಧವಾರ ನಡೆದ ಫೈನಲ್‌ನಲ್ಲಿ ರೈಸಿಂಗ್ ಸ್ಟಾರ್ ತಂಡವು 12–3ರಿಂದ ಚಿನ್ಮಯ ವಿದ್ಯಾಲಯ ‘ಎ’ ತಂಡವನ್ನು ಮಣಿಸಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಹೊಯ್ಸಳ ಸ್ಪೋರ್ಟ್ಸ್ ಅಕಾಡೆಮಿ ತಂಡವು ಸೇಂಟ್ ಜೋಸೆಫ್ ಬಾಲಕರ ತಂಡವನ್ನು ಸೋಲಿಸಿತು.
ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ರೈಸಿಂಗ್ಸ್ ಸ್ಟಾರ್ ತಂಡವು 9–0 ಗೋಲುಗಳಿಂದ ಹೊಯ್ಸಳ ತಂಡವನ್ನು; ಚಿನ್ಮಯ ತಂಡವು 3–2ರಿಂದ ಸೇಂಟ್ ಜೋಸೆಫ್ ತಂಡವನ್ನು ಮಣಿಸಿತ್ತು.
ಸಾಯ್ ತಂಡಕ್ಕೆ ಪ್ರಶಸ್ತಿ:
ಬಾಲಕಿಯರ ವಿಭಾಗದಲ್ಲಿ ಸಾಯ್ ‘ಎ’ ತಂಡವು 4–1ರಿಂದ ಸಾಯ್ ‘ಬಿ’ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬಿಷಪ್ ಕಾಟನ್ ಶಾಲಾ ತಂಡವು 5–1ರಿಂದ ವಿದ್ಯಾಶಿಲ್ಪ್ ತಂಡವನ್ನು ಸೋಲಿಸಿತು. ಇದಕ್ಕೂ ಮೊದಲು ಸೆಮಿಫೈನಲ್‌ನಲ್ಲಿ ಸಾಯ್ ‘ಎ’ ತಂಡವು 5–0ಯಿಂದ ವಿದ್ಯಾಶಿಲ್ಪ್ ತಂಡವನ್ನು; ಸಾಯಿ ‘ಬಿ’ ತಂಡವನ್ನು 6–1ರಿಂದ ಬಿಷಪ್ ಕಾಟನ್ ತಂಡವನ್ನು ಸೋಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.