ADVERTISEMENT

400 ಮೀ. ಫ್ರೀಸ್ಟೈಲ್‌ ಮಿಕ್ಸೆಡ್‌ ರಿಲೆ: ಅಮೆರಿಕ ತಂಡದಿಂದ ದಾಖಲೆ

ವಿಶ್ವ ಈಜು ಚಾಂಪಿಯನ್‌ಷಿಪ್‌

ರಾಯಿಟರ್ಸ್
Published 27 ಜುಲೈ 2019, 20:05 IST
Last Updated 27 ಜುಲೈ 2019, 20:05 IST

ಗುವಾಂಗ್ಜು, ದಕ್ಷಿಣ ಕೊರಿಯಾ: ಪ್ರಬಲ ಅಮೆರಿಕ ತಂಡ, ವಿಶ್ವ ಈಜು ಚಾಂಪಿಯನ್‌ಷಿಪ್‌ನ 4x100 ಮೀ. ಮಿಕ್ಸೆಡ್‌ ಫ್ರೀಸ್ಟೈಲ್‌ ರಿಲೇ ಸ್ಪರ್ಧೆಯಲ್ಲಿ ಶನಿವಾರ ನೂತನ ವಿಶ್ವ ದಾಖಲೆ ಸ್ಥಾಪಿಸಿದೆ.

ಕೆಲೆಬ್‌ ಡ್ರೆಸೆಲ್, ಜಾಕ್‌ ಆ್ಯಪಲ್‌, ಮೆಲೋರಿ ಕಮರ್‌ಫೋರ್ಡ್‌ ಮತ್ತು ಸಿಮೋನೆ ಮಾನ್ಯುಯೆಲ್‌ ಅವರನ್ನೊಳಗೊಂಡ ತಂಡ ನಿಗದಿತ ದೂರವನ್ನು 3ನಿ.19.40 ಸೆ.ಗಳಲ್ಲಿ ಕ್ರಮಿಸಿತು. ಈ ಹಿಂದಿನ ದಾಖಲೆ (3ನಿ.19.60ಸೆ.) ಅಮೆರಿಕ ತಂಡದ ಹೆಸರಿನಲ್ಲೇ ಇತ್ತು.

ಆಸ್ಟ್ರೇಲಿಯಾ ತಂಡ (3ನಿ.19.97 ಸೆ.) ಬೆಳ್ಳಿಯ ಪದಕ ತನ್ನದಾಗಿಸಿಕೊಂಡರೆ, ಫ್ರಾನ್ಸ್‌ ತಂಡ (3ನಿ.22.11ಸೆ) ಕಂಚಿನ ಪದಕ ಪಡೆಯಿತು.

ADVERTISEMENT

ತಪ್ಪೊಪ್ಪಿಕೊಂಡ ಈಜುಗಾರ್ತಿ:

4 x100 ಮೀ. ಫ್ರೀಸ್ಟೈಲ್‌ ರಿಲೇ ಸ್ಪರ್ಧೆಯಲ್ಲಿ ವಿಶ್ವದಾಖಲೆ ಸ್ಥಾಪಿಸಿದ್ದ ಆಸ್ಟ್ರೇಲಿಯಾ ಮಹಿಳಾ ತಂಡದಲ್ಲಿದ್ದ ಶಯ್ನಾ ಜಾಕ್‌, ಉದ್ದೀಪನ ಮದ್ದುಸೇವನೆ ಪರೀಕ್ಷೆಯಲ್ಲಿ ಸಿಲುಕಿದ್ದಾರೆ. ಆದರೆ ಉದ್ದೇಶಪೂರ್ವಕವಾಗಿ ತಪ್ಪುಮಾಡಿಲ್ಲ. ಮದ್ದುಸೇವನೆ ಗೊತ್ತಿಲ್ಲದೇ ಆಗಿದೆ ಎಂದು 20 ವರ್ಷದ ಈ ಈಜುಗಾರ್ತಿ ಹೇಳಿದ್ದಾರೆ.

ಕಳೆದ ತಿಂಗಳು ಸ್ಪರ್ಧೆಯಿಲ್ಲದ ವೇಳೆ ಈ ಪರೀಕ್ಷೆ ನಡೆದಿತ್ತು. ಅವರನ್ನು ಅಮಾನತು ಮಾಡಲಾಗಿದೆ ಎಂದು ‘ಸ್ವಿಮ್ಮಿಂಗ್‌ ಆಸ್ಟ್ರೇಲಿಯಾ’ ತಿಳಿಸಿದೆ. ಚಾಂಪಿಯನ್‌ಷಿಪ್‌ಗೆ ಮೊದಲು ಕೊರಿಯಾಕ್ಕೆ ಬಂದಿದ್ದರು. ಆದರೆ ವಿಷಯ ಗೊತ್ತಾದ ತಕ್ಷಣ ಸ್ವದೇಶಕ್ಕೆ ಮರಳಿದ್ದರು.

‘ಅದು ಉದ್ದೀಪನ ಮದ್ದು ಎಂದು ಗೊತ್ತಿಲ್ಲದೇ ಸೇವಿಸಿರಬಹುದು’ ಎಂದು ಶಯ್ನಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.