ADVERTISEMENT

ಕೋವಿಡ್ ಭೀತಿ | ಒಲಿಂಪಿಕ್ ಕ್ರೀಡಾಕೂಟ ಮುಂದೂಡುವಂತೆ ಯುಎಸ್‌ಎ ಈಜು ಮಂಡಳಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 7:37 IST
Last Updated 21 ಮಾರ್ಚ್ 2020, 7:37 IST
   

ಬೊಗೊಟಾ:ಜಾಗತಿಕ ಪಿಡುಗು ಕೋವಿಡ್‌–19 ಭೀತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಬಾರಿಯ ಒಲಿಂಪಿಕ್‌ ಕ್ರೀಡಾಕೂಟವನ್ನು ಒಂದು ವರ್ಷದ ವರೆಗೆ ಮುಂದೂಡಬೇಕು ಎಂದು ಯುಎಸ್‌ಎ ಈಜು ಮಂಡಳಿ ಆಗ್ರಹಿಸಿದೆ. ಆ ಮೂಲಕ ಕ್ರೀಡಾಕೂಟವನ್ನು ಮುಂದೂಡಬೇಕೆಂಬ ಕರೆಗೆ ಧ್ವನಿಗೂಡಿಸಿವೆ.

ಈ ಸಂಬಂಧ ಒಲಿಂಪಿಕ್‌ ಹಾಗೂ ಪ್ಯಾರಾ ಒಲಿಂಪಿಕ್‌ ಸಮಿತೆಗೆ ಪತ್ರ ಬರೆದಿರುವ ಯುಎಸ್‌ಎ ಈಜು ಮಂಡಳಿಯ ಸಿಇಒ ಟಿಮ್‌ ಹಿಂಕೇ, ‘ಕ್ರೀಡಾ ಜಗತ್ತು ತಲೆಕೆಳಗಾಗಿರುವುದನ್ನು ನೋಡುತ್ತಿದ್ದೇವೆ. ಎಲ್ಲರ ಆರೋಗ್ಯ ಹಾಗೂ ಸುರಕ್ಷತೆಗೆ ಪ್ರಾಮುಖ್ಯತೆ ನೀಡಬೇಕು.ಜಾಗತಿಕ ಪಿಡುಗು ಅಥ್ಲೆಟಿಕ್ ಸಿದ್ಧತೆಯ ಮೇಲೆ ಉಂಟುಮಾಡುತ್ತಿರುವ ಪರಿಣಾಮಗಳನ್ನು ಸೂಕ್ತರೀತಿಯಲ್ಲಿಗಮನಿಸಬೇಕು’ ಎಂದಿದ್ದಾರೆ.

ಪ್ರಪಂಚದಾದ್ಯಂತ ಇದುವರೆಗೆ ಸುಮಾರು2.7ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.ಸಾವಿನ ಸಂಖ್ಯೆ 11 ಸಾವಿರ ದಾಟಿದೆ.

ADVERTISEMENT

ವಿವಿಧ ಕ್ರೀಡಾ ಲೀಗ್‌ ಮತ್ತು ಒಲಿಂಪಿಕ್ಸ್‌ ಟ್ರಯಲ್ಸ್‌ಗಳನ್ನು ಮುಂದೂಡಲಾಗಿದೆ. ಆದರೆ ಟೋಕಿಯೊ ಕ್ರೀಡೆಗಳನ್ನು ರದ್ದು ಮಾಡುವುದಿಲ್ಲ ಎಂದು ಐಒಸಿ ಇದುವರೆಗೆ ಹೇಳುತ್ತಾ ಬಂದಿದೆ.

ಒಲಿಂಪಿಕ್‌ ಕ್ರೀಡೆಗಳನ್ನು ಮುಂದೂಡಬೇಕು ಎಂದು ಕೊಲಂಬಿಯಾ ಹಾಗೂ ಸ್ಲೊವೇನಿಯಾದ ಒಲಿಂಪಿಕ್‌ ಸಮಿತಿಗಳೂ ಒತ್ತಾಯಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.