ADVERTISEMENT

ಭಾರತ ಕುಸ್ತಿ ಫೆಡರೇಷನ್‌ ಸದಸ್ಯತ್ವ ಅಮಾನತುಗೊಳಿಸಿದ ವಿಶ್ವ ಕುಸ್ತಿ ಒಕ್ಕೂಟ

ಪಿಟಿಐ
Published 24 ಆಗಸ್ಟ್ 2023, 8:32 IST
Last Updated 24 ಆಗಸ್ಟ್ 2023, 8:32 IST
ಭಾರತ ಕುಸ್ತಿ ಫೆಡರೇಷನ್‌
ಭಾರತ ಕುಸ್ತಿ ಫೆಡರೇಷನ್‌   

 ನವದೆಹಲಿ: ಸರಿಯಾದ ಸಮಯಕ್ಕೆ ಚುನಾವಣೆ ನಡೆಸಲು ವಿಫಲವಾದ ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಸದಸ್ಯತ್ವವನ್ನು ವಿಶ್ವ ಕುಸ್ತಿ ಒಕ್ಕೂಟ (UWW) ಗುರುವಾರ ಅಮಾನತುಗೊಳಿಸಿದೆ.

ಇದರ ಪರಿಣಾಮ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ದೇಶದ ಧ್ವಜ ಹಿಡಿದು ಭಾರತೀಯ ಕುಸ್ತಿ‍ಪಟುಗಳು ಸ್ಪರ್ಧಿಸುವಂತಿಲ್ಲ.

ಭೂಪೇಂದರ್ ಸಿಂಗ್ ನೇತೃತ್ವದ ತಾತ್ಕಾಲಿಕ ಸಮಿತಿಯು ಚುನಾವಣೆಗೆ ನೀಡಿದ್ದ 45 ದಿನಗಳ ಗಡುವನ್ನು ಗೌರವಿಸಲಿಲ್ಲ. ಹೀಗಾಗಿ ಸೆಪ್ಟೆಂಬರ್ 16 ರಿಂದ ಪ್ರಾರಂಭವಾಗುವ ಒಲಿಂಪಿಕ್ ಅರ್ಹತಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಕುಸ್ತಿಪಟುಗಳು ‘ತಟಸ್ಥ ಕ್ರೀಡಾಪಟು’ಗಳಾಗಿ ಸ್ಪರ್ಧಿಸಬೇಕಾಗುತ್ತದೆ ಎಂದು ಹೇಳಿದೆ

ADVERTISEMENT

ಈ ಹಿಂದೆ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಮಾಡಿದ ಹಿನ್ನೆಲೆಯಲ್ಲಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಜುಲೈ 11 ರಂದು ಚುನಾವಣೆ ನಡೆಯಬೇಕಿತ್ತು.

ವಿಶ್ವ ಕುಸ್ತಿ ಒಕ್ಕೂಟವು, ಮುಂದಿನ 45 ದಿನಗಳಲ್ಲಿ (ಜುಲೈ 15 ರೊಳಗೆ) ಭಾರತದ ಕುಸ್ತಿ ಫೆಡರೇಶನ್​ಗೆ ಚುನಾವಣೆ ನಡೆಯದಿದ್ದರೆ ಸದಸ್ಯತ್ವವನ್ನು ರದ್ದುಗೊಳಿಸಲಾಗುವುದು ಎಂದು ಮೇ 30 ರಂದು ಎಚ್ಚರಿಕೆಯನ್ನೂ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.