ADVERTISEMENT

ಬ್ಯಾಡ್ಮಿಂಟನ್‌: ವಿಪಿನ್, ಅನುರಾಧಾ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 12:48 IST
Last Updated 22 ಜನವರಿ 2023, 12:48 IST
ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದ (ಎಡದಿಂದ) ರವಿ ವರ್ಮಾ, ವಿಪಿನ್‌ ಜಯನಾರಾಯಣ, ಅನುರಾಧಾ ಮತ್ತು ಸೂಸನ್ ಅವರೊಂದಿಗೆ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಆಟಗಾರ ಅರವಿಂದ ಭಟ್ (ಮಧ್ಯದಲ್ಲಿ) ಇದ್ದಾರೆ
ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದ (ಎಡದಿಂದ) ರವಿ ವರ್ಮಾ, ವಿಪಿನ್‌ ಜಯನಾರಾಯಣ, ಅನುರಾಧಾ ಮತ್ತು ಸೂಸನ್ ಅವರೊಂದಿಗೆ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಆಟಗಾರ ಅರವಿಂದ ಭಟ್ (ಮಧ್ಯದಲ್ಲಿ) ಇದ್ದಾರೆ   

ಬೆಂಗಳೂರು: ವಿಪಿನ್‌ ಜಯನಾರಾಯಣ ಮತ್ತು ಅನುರಾಧಾ ಯಡವಳ್ಳಿ ಅವರು ಭಾನುವಾರ ಇಲ್ಲಿ ನಡೆದ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್‌ ಲೀಗ್‌ ‘ರಿಪಬ್ಲಿಕ್‌ ಡೇ ಕಪ್‌’ ಹಿರಿಯರ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆದರು.

ಲೆವೆಲ್‌ ಅಪ್‌ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ನಡೆದ ಟೂರ್ನಿಯ 40 ವರ್ಷಕ್ಕಿಂತ ಮೇಲಿನವರ ವಿಭಾಗದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ವಿಪಿನ್‌ 15–10, 15–10 ರಲ್ಲಿ ರವಿ ವರ್ಮಾ ಅವರನ್ನು ಮಣಿಸಿದರು. ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಅನುರಾಧಾ 15–7, 15–11 ರಲ್ಲಿ ಸೂಸನ್ ವಿರುದ್ದ ಗೆದ್ದರು.

45 ವರ್ಷಕ್ಕಿಂತ ಮೇಲಿನವರ ಸಿಂಗಲ್ಸ್‌ ವಿಭಾಗದಲ್ಲಿ ಮುರಳಿ ಕೃಷ್ಣ 15–11, 15–11 ರಲ್ಲಿ ಎನ್‌.ಪಿ.ಆನಂದ್‌ ವಿರುದ್ಧವೂ; 50 ವರ್ಷಕ್ಕಿಂತ ಮೇಲಿನವರ ವಿಭಾಗದಲ್ಲಿ ಮಧುಸೂದನ್‌ ರೆಡ್ಡಿ 13–15, 15–11, 15–11 ರಲ್ಲಿ ಅನಿಲ್‌ ದತ್ತ್‌ ವಿರುದ್ಧವೂ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು.

ADVERTISEMENT

ಪುರುಷರ ಡಬಲ್ಸ್‌ ವಿಭಾಗದ 40 ವರ್ಷಕ್ಕಿಂತ ಮೇಲಿನವರ ಫೈನಲ್‌ನಲ್ಲಿ ಕೋಳಪ್ಪ– ಸಿಜೊ 15–10, 15–11 ರಲ್ಲಿ ಪಿ.ಕೆ.ಚಂದ್ರಶೇಖರ್‌– ಶಿವ ವಿರುದ್ಧ ಗೆದ್ದರೆ, 45 ವರ್ಷಕ್ಕಿಂತ ಮೇಲಿನವರ ವಿಭಾಗದಲ್ಲಿ ಪಿ.ಕೆ.ಚಂದ್ರಶೇಖರ್‌– ಶ್ರೀಧರ ಜೋಡಿ 15–10, 15–7 ರಲ್ಲಿ ಸುದೀಶ್‌– ದ್ವಾರಕ್‌ ಎದುರು ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.