ಹರ್ಷವರ್ಧನ್ ಸಾಹು
ಲಿಮಾ(ಪೆರು): ಭಾರತ ತಂಡದ ವೇಟ್‌ಲಿಫ್ಟರ್‌ಗಳು ಐಡಬ್ಲ್ಯುಎಫ್ ಯೂತ್ ಮತ್ತು ಜೂನಿಯರ್ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡರು.
ಜ್ಯೋತ್ಸ್ನಾ ಸಾಬರ್ ಅವರು ಯುವ ಬಾಲಕಿಯರ 40 ಕೆ.ಜಿ. ಕೆಟಗರಿಯಲ್ಲಿ ಒಟ್ಟು 129 ಕೆ.ಜಿ (56ಕೆಜಿ + 72 ಕೆಜಿ) ಭಾರ ಎತ್ತಿ ಕಂಚಿನ ಪದಕ ಗೆದ್ದುಕೊಂಡರು. ಅವರು ಬುಧವಾರ ನಡೆದ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಯುವ ಬಾಲಕರ ವಿಭಾಗದ 49 ಕೆ.ಜಿ. ಕೆಟಗರಿಯಲ್ಲಿ ಹರ್ಷವರ್ಧನ್ ಸಾಹು ಒಟ್ಟು 197 ಕೆ.ಜಿ. ಭಾರ ಎತ್ತಿ ಮೂರನೇ ಸ್ಥಾನ ಪಡೆದರು. ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಅವರು ಇದಕ್ಕೆ ಮೊದಲು ಕಂಚಿನ ಪದಕ ಪಡೆದಿದ್ದರು. ಒಲಿಂಪಿಕ್ಸ್ ಮಾದರಿಗೆ ಭಿನ್ನವಾಗಿ ವಿಶ್ವ ಚಾಂಪಿಯನ್‌ಷಿಪ್ಸ್‌ನಲ್ಲಿ ಸ್ನಾಚ್, ಕ್ಲೀನ್ ಮತ್ತು ಜರ್ಕ್ ಮತ್ತು ಒಟ್ಟಾರೆ ತೂಕ ವಿಭಾಗದಲ್ಲಿ ಪ್ರತ್ಯೇಕವಾಗಿ ಪದಕಗಳನ್ನು ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.