ADVERTISEMENT

ಮಹಿಳಾ ವಿಶ್ವಕಪ್ ಹಾಕಿ ಟೂರ್ನಿ: ಕ್ವಾರ್ಟರ್‌ಫೈನಲ್‌ ಮೇಲೆ ಭಾರತದ ಕಣ್ಣು

ನ್ಯೂಜಿಲೆಂಡ್‌ ತಂಡದ ಸವಾಲು

ಪಿಟಿಐ
Published 6 ಜುಲೈ 2022, 13:45 IST
Last Updated 6 ಜುಲೈ 2022, 13:45 IST
ಭಾರತ ತಂಡದ ಆಟಗಾರ್ತಿಯರು– ಪಿಟಿಐ ಚಿತ್ರ
ಭಾರತ ತಂಡದ ಆಟಗಾರ್ತಿಯರು– ಪಿಟಿಐ ಚಿತ್ರ   

ಆ್ಯಮ್‌ಸ್ಟೆಲ್ವೀನ್‌, ನೆದರ್ಲೆಂಡ್ಸ್: ಭಾರತ ಮಹಿಳಾ ತಂಡವು ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಗುರುವಾರ ನ್ಯೂಜಿಲೆಂಡ್‌ ಸವಾಲು ಎದುರಿಸಲಿದೆ. ಕ್ವಾರ್ಟರ್‌ಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯವನ್ನು ಸವಿತಾ ಪೂನಿಯಾ ಪಡೆ ಗೆಲ್ಲುವ ಅಗತ್ಯವಿದೆ.

ಕಳೆದ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ನಾಲ್ಕನೇ ಸ್ಥಾನ ಗಳಿಸಿದ್ದ ಭಾರತ, ಈ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಇಂಗ್ಲೆಂಡ್‌ ಮತ್ತು ಚೀನಾ ಎದುರು 1–1ರಿಂದ ಡ್ರಾ ಸಾಧಿಸಿತ್ತು.

ಭಾರತ ತಂಡವು ಬಿ ಗುಂಪಿನಲ್ಲಿ ಸದ್ಯ ಮೂರನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಚೀನಾ ಮತ್ತು ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್‌ಗಿಂತ ಎರಡು ಪಾಯಿಂಟ್ಸ್ ಹಿಂದಿದೆ.

ADVERTISEMENT

ಟೂರ್ನಿಯಲ್ಲಿ ಒಟ್ಟು 16 ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯಲಿವೆ. ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳ ನಡುವಿನ ಹಣಾಹಣಿಯು, ಕ್ವಾರ್ಟರ್‌ಫೈನಲ್‌ನ ಇನ್ನುಳಿದ ನಾಲ್ಕು ಸ್ಥಾನಗಳನ್ನು ನಿರ್ಧರಿಸಲಿವೆ.

ಎಂಟರಘಟ್ಟಕ್ಕೆ ನೇರ ಪ್ರವೇಶ ಪಡೆಯುವ ಹಂಬಲದಲ್ಲಿರುವ ಭಾರತ, ಈ ಪಂದ್ಯದಲ್ಲಿ ಸ್ಪಷ್ಟ ಗೆಲುವು ದಾಖಲಿಸಬೇಕು. ಅಲ್ಲದೆ ಚೀನಾ ತಂಡವು ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಡ್ರಾ ಅಥವಾ ಸೋಲು ಕಾಣಬೇಕು.

ಪಂದ್ಯ ಆರಂಭ: ರಾತ್ರಿ 11

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.