ಪ್ರಾತಿನಿಧಿಕ ಚಿತ್ರ
ಮಂಗಳೂರು: ನಗರದ ಐರನ್ ಕ್ಲಬ್‌ನ ರಜನಿ ಮಲ್ಲ ಅವರು ಎಸ್ ಸುರೇಂದ್ರ ಶೆಣೈ ಸ್ಮರಣಾರ್ಥ ಇಲ್ಲಿ ನಡೆಯುತ್ತಿರುವ ಸ್ಪರ್ಧೆಗಳಲ್ಲಿ ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಎರಡು ಚಿನ್ನ ಗೆದ್ದು ಸಂಭ್ರಮಿಸಿದರು.
ಮಂಗಳೂರಿನ ಐರನ್ ಗೇಮ್ಸ್ ಪ್ರಮೋಟರ್ಸ್, ಬೋಂದೆಲ್‌ನ ಕೆಪಿಟಿಸಿ ನೌಕರರ ಸಭಾಭವನದಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್ ಮಹಿಳೆಯರ ಸೀನಿಯರ್ ಮತ್ತು ಜೂನಿಯರ್ 63ಕೆಜಿ ವಿಭಾಗದಲ್ಲಿ ಅವರು ಚಿನ್ನಕ್ಕೆ ಮುತ್ತಿಕ್ಕಿದರು. ಸ್ಕ್ವಾಟ್‌ನಲ್ಲಿ 170 ಕೆಜಿ, ಬೆಂಚ್ ಪ್ರೆಸ್‌ನಲ್ಲಿ 85 ಮತ್ತು ಡೆಡ್ ಲಿಫ್ಟ್‌ನಲ್ಲಿ 140 ಕೆಜಿ ಭಾರ ಎತ್ತಿದ ಅವರು ಒಟ್ಟು 395 ಕೆಜಿ ಸಾಧನೆ ಮಾಡಿದರು.
ಫಲಿತಾಂಶಗಳು
ಮಹಿಳೆಯರ 63 ಕೆಜಿ: ರಜನಿ ಮಲ್ಲ (ಐರನ್ ಡೆನ್)–1. ಸಾಧನೆ: 395 ಕೆಜಿ, ಐಶ್ವರ್ಯಾ (ಐರನ್ ಕಿಂಗ್‌ಡಮ್)–2, ಪವಿತ್ರಾ ಶಂಕರನ್ (ಬಾಲಾರ್ಕ ಫಿಟ್‌ನೆಸ್)–3; 57 ಕೆಜಿ: ಅಭಿಜ್ಞಾ ಪಿ (ಬಾಲಾರ್ಕ)–1. ಸಾಧನೆ: 265ಕೆಜಿ, ಪವಿತ್ರಾ ಎಸ್ (ಕ್ಲ್ಯಾನ್ ಫಿಟ್‌ನೆಸ್)–2, 52 ಕೆಜಿ: ಜ್ಯೋತಿ ತಿಮ್ಮರಡ್ಡಿ (ಬಾಲಾರ್ಕ)–1. ಸಾಧನೆ: 265 ಕೆಜಿ, ಪ್ರಿಯಾ ಅಗ್ನಿಹೋತ್ರಿ (ಬೆಂಗಳೂರು ಪವರ್ ಲಿಫ್ಟಿಂಗ್ ಸಂಸ್ಥೆ)–2, ಆ್ಯನಿ ಲಿಸಾ (ಐರನ್ ಡೆನ್)–3; 47 ಕೆಜಿ: ರಿದ್ವಿನ್ ತನುಜಾ (ಐರನ್ ಡೆನ್)–1. ಸಾಧನೆ: 155 ಕೆಜಿ, ಮೋನಿಕಾ (ಪವರ್ ಜೋನ್, ಹಳೆಯಂಗಡಿ)–2.
ಜೂನಿಯರ್ ಮಹಿಳೆಯರ ವಿಭಾಗ: 63 ಕೆಜಿ: ರಜನಿ ಮಲ್ಲ (ಐಎನ್ ಡೆನ್)–1. ಸಾಧನೆ: 395 ಕೆಜಿ; 57 ಕೆಜಿ: ತನುಶ್ರೀ ವಿ (ಆರ್.ಫಿಟ್‌ನೆಸ್ ಹರಿಹರ)1. ಸಾಧನೆ: 340 ಕೆಜಿ, ದಿಶಾ ಮೋಹನ್ (ಬಾಲಾರ್ಕ)–2, ಮೋಕ್ಷಿತಾ ಗರೋಡೆ (ಐರನ್ ಡೆನ್)–3; 52 ಕೆಜಿ: ಶಮಿತಾ ಎಂ (ಕಾರ್ಲೋಸ್ ಜಿಮ್ ಮಂಗಳೂರು)–1. ಸಾಧನೆ: 262.5 ಕೆಜಿ, ಆ್ಯನಿ ಲಿಸಾ (ಐರನ್ ಡೆನ್)–2, ಖುಷಿ ಗಟ್ಟಿ (ಐರನ್ ಡೆನ್)–3; 47 ಕೆಜಿ: ರಿದ್ವಿನ್ ತನುಜಾ (ಐರನ್ ಡೆನ್)–1. ಸಾಧನೆ: 155 ಕೆಜಿ; 43ಕೆಜಿ: ಲಲಿತಾ ವೈಷ್ಣವಿ (ಎಪಿಸಿ)–1. ಸಾಧನೆ: 165 ಕೆಜಿ, ಸಂಜನಾ (ರಾ ಫಿಟ್ನೆಸ್)–2.
ಸಬ್ ಜೂನಿಯರ್ ಮಹಿಳೆಯರ ವಿಭಾಗ: 63 ಕೆಜಿ: ಅಶ್ನಾ ಫ್ರೆಯಾ ಫೆರಾವೊ (ಕಾರ್ಲೋಸ್ ಜಿಮ್)–1. ಸಾಧನೆ: 220 ಕೆಜಿ, ರೀನಾ (ಶಿವಮೊಗ್ಗ)–2, ಕೀರ್ತಿ ಪೂಜಾರಿ (ಐರನ್ ಡೆನ್)–3; 57 ಕೆಜಿ: ರಾನಿಯಾ ನೇಹಾ ಫೆರಾವೊ (ಕಾರ್ಲೋಸ್)–1. ಸಾಧನೆ: 257.5 ಕೆಜಿ, ಲಿಯೊನಾ ಲೂವಿಸ್ (ಐರನ್ ಡೆನ್)–2, ಡೆನ್ಸಿ ಲೂಯಿಸ್ (ಐರನ್ ಡೆನ್)–3; 52 ಕೆಜಿ: ಸೌನಿ ಎಸ್ (ಶಿವಮೊಗ್ಗ)–1. ಸಾಧನೆ: 225 ಕೆಜಿ, ಖುಷಿ ಬಂಗೇರ (ಐಎನ್ ಡೆನ್)–2, ರಶ್ಮಿ ಕುಲಾಲ್ (ಐರನ್ ಡೆನ್)–3; 47 ಕೆಜಿ: ಶ್ರುತಿ (ಐರನ್ ಕಿಂಗ್ಡಮ್)–1. ಸಾಧನೆ: 147.5 ಕೆಜಿ, ಸೂಸನ್ (ಐರನ್ ಡೆನ್)–2; 43 ಕೆಜಿ: ರಕ್ಷಾ ಪೂಜಾರಿ (ಐರನ್ ಡೆನ್)–1. ಸಾಧನೆ: 137.5 ಕೆಜಿ, ಸಾಧಿಕಾ ಪತ್ತಾರ್ (ಈಟರ್ನಲ್ ಜಿಮ್ ಹುಬ್ಬಳ್ಳಿ)–2.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.