ADVERTISEMENT

Olympics| ಒಲಿಂಪಿಕ್ಸ್‌ ಕ್ರೀಡಾ ಕೂಟದ ಕೌತುಕ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 18:28 IST
Last Updated 23 ಜುಲೈ 2021, 18:28 IST
   

ಮುಂದೂಡಲ್ಪಟ್ಟ ಮೊದಲ ಕೂಟ

ಯುದ್ಧೇತರ ಕಾರಣಗಳಿಂದಾಗಿ ಮುಂದೂಡಲ್ಪಟ್ಟ ಮೊದಲ ಒಲಿಂಪಿಕ್ಸ್‌ ಇದಾಗಿದೆ. ಖಾಲಿ ಕ್ರೀಡಾಂಗಣಗಳಲ್ಲಿ ಸ್ಪರ್ಧೆಗಳು ನಡೆಯುವುದು ಕೂಡ ಇದೇ ಮೊದಲು. ಈ ಬಾರಿ ವಿಜೇತ ಕ್ರೀಡಾಪಟುಗಳ ಕೊರಳಿಗೆ ಗಣ್ಯರು ಪದಕ ಹಾಕುವುದಿಲ್ಲ. ಸೋಂಕು ನಿವಾರಕ ಸಿಂಪಡಿಸಿದ ಟ್ರೇಗಳಲ್ಲಿ ಇಟ್ಟಿರುವ ಪದಕಗಳನ್ನು ಕ್ರೀಡಾಪಟುಗಳೇ ಎತ್ತಿ ಕೊರಳಿಗೆ ಹಾಕಿಕೊಳ್ಳಬೇಕು.

ತ್ಯಾಜ್ಯದಿಂದ ರೂಪುಗೊಂಡ ಪದಕ

ADVERTISEMENT

ನಿರುಪಯೋಗಿ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಬಳಸಿ 5 ಸಾವಿರ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತಯಾರಿಸಲಾಗಿದೆ. ಇದನ್ನು ವಿಜೇತರಿಗೆ ವಿತರಿಸಲಾಗುತ್ತದೆ. ಈ ಪದಕಗಳು ಕ್ರೀಡಾಪಟುಗಳ ಶಕ್ತಿ ಹಾಗೂ ವೈವಿಧ್ಯತೆಯನ್ನು ಬಿಂಬಿಸುತ್ತವೆ. ಜಪಾನ್‌ ಸಂಸ್ಕೃತಿಯ ಪ್ರತೀಕವೂ ಹೌದು. ಪದಕದ ಮುಂಭಾಗದಲ್ಲಿ ಟೋಕಿಯೊ ಕೂಟದ ಲಾಂಛನ ಚಿತ್ರಿಸಲಾಗಿದೆ. ಹಿಂಬದಿಯಲ್ಲಿ ಗ್ರೀಕ್‌ನ ವಿಜಯ ದೇವತೆಯ ಚಿತ್ರ ಇದೆ.

ಲಿಂಗ ಸಮಾನತೆ ಸಾರುವ ಕೂಟ

ಈ ಸಲದ ಕೂಟದಲ್ಲಿ ಲಿಂಗ ಸಮಾನತೆಗೆ ಒತ್ತು ನೀಡಿರುವುದಾಗಿ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಈಗಾಗಲೇ ಪ್ರಕಟಿಸಿದೆ. ಎಲ್ಲರೂ ಲಿಂಗ ಸಮಾನತೆ ಕಾಪಾಡಬೇಕು ಎಂದು ತನ್ನ ಅಧೀನಕ್ಕೊಳಪಡುವ 206 ಸದಸ್ಯ ಸಮಿತಿಗಳಿಗೂ ಸೂಚನೆ ನೀಡಿದೆ. ‍ಒಲಿಂಪಿಕ್ಸ್‌ನಲ್ಲಿ ಪ್ರತಿ ಬಾರಿಯೂ ಪ್ರಾಬಲ್ಯ ಮೆರೆಯುವ ಚೀನಾ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಕೆನಡಾ ದೇಶಗಳು ಈ ಬಾರಿ ಪುರುಷರಿಗಿಂತಲೂ ಮಹಿಳಾ ಸ್ಪರ್ಧಿಗಳನ್ನೇ ಹೆಚ್ಚಾಗಿ ಕಳುಹಿಸಿವೆ.

ಶೂಟರ್‌ಗಳಿಗೆ ಮೊದಲ ಪದಕ

ಜುಲೈ 24ರಂದು ಮಹಿಳೆಯರ 10 ಮೀಟರ್ಸ್‌ ಏರ್‌ ರೈಫಲ್‌ ಶೂಟಿಂಗ್‌ ಫೈನಲ್‌ ನಿಗದಿಯಾಗಿದೆ. ಇದರಲ್ಲಿ ಉತ್ತಮ ಸಾಮರ್ಥ್ಯ ತೋರಿದವರು ಈ ಬಾರಿಯ ಕೂಟದಲ್ಲಿ ಪದಕ ಗೆದ್ದ ಮೊದಲಿಗರು ಎನಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.