ಬೆಂಗಳೂರು: ಟಿಸಿಎಸ್ ವಿಶ್ವ 10ಕೆ ಬೆಂಗಳೂರು-2025 ಓಟ ಏಪ್ರಿಲ್ 27ರಂದು ಉದ್ಯಾನಗರಿನಲ್ಲಿ ನಡೆಯಲಿದೆ. 17ನೇ ಈ ಆವೃತ್ತಿಯಲ್ಲಿ ಒಟ್ಟು ₹1,81 ಕೋಟಿ ಬಹುಮಾನ ಮೊತ್ತ ನಿಗದಿಪಡಿಸಲಾಗಿದೆ.
ಕಬ್ಬನ್ ರಸ್ತೆಯಿಂದ (ಆರ್‌ಎಸ್ಎಒಐ ಗೇಟ್ ನಂ.5 ಎದುರು) ಓಟಕ್ಕೆ ಚಾಲನೆ ಸಿಗಲಿದ್ದು, ಕಬ್ಬರ್ ರಸ್ತೆಯ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದ ಹೊರಭಾಗದಲ್ಲಿ ಕೊನೆಗೊಳ್ಳಲಿದೆ.
ವಿಶ್ವದ ಪ್ರಮುಖ 10ಕೆ ಸ್ಪರ್ಧೆಗಳಲ್ಲಿ ಒಂದಾಗಿರುವ ಈ ಓಟದಲ್ಲಿ ವಿದೇಶದ ಅಥ್ಲೀಟ್‌ಗಳು, ದೇಶದ ಅಗ್ರ ಓಟಗಾರರು ಭಾಗವಹಿಸಲಿದ್ದಾರೆ. ಎಂದುಟಿಸಿಎಸ್ ಬೆಂಗಳೂರಿನ ಪ್ರಾದೇಶಿಕ ಮುಖ್ಯಸ್ಥ ಸುನಿಲ್ ದೇಶಪಾಂಡೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರತಿವರ್ಷದಂತೆ ಈ ಬಾರಿಯೂ ಓಪನ್ 10ಕೆ, ಮಜಾ ಓಟ (5.1ಕಿ.ಮೀ), ಹಿರಿಯ ನಾಗರಿಕರ ಓಟ, ಮತ್ತು ಚಾಂಪಿಯನ್ಸ್ (4.2 ಕಿ.ಮೀ) ಓಟಗಳು ನಡೆಯಲಿವೆ. ನೋಂದಣಿ ಪ್ರಕ್ರಿಯೆ ಇದೇ 20ರಂದು ಆರಂಭಗೊಂಡಿದ್ದು, ಮಾರ್ಚ್ 28ಕ್ಕೆ ಮುಕ್ತಾಯವಾಗಲಿದೆ. ನೋಂದಣಿಗೆ: https://tcsworld10k.procam.in/
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.