ADVERTISEMENT

ವಿಶ್ವ ಅಥ್ಲೆಟಿಕ್: ಬೆಳ್ಳಿ ಪದಕ ಗೆದ್ದು ಇತಿಹಾಸ ರಚಿಸಿದ ನೀರಜ್ ಚೋಪ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜುಲೈ 2022, 5:23 IST
Last Updated 24 ಜುಲೈ 2022, 5:23 IST
ನೀರಜ್‌ ಚೋಪ್ರಾ
ನೀರಜ್‌ ಚೋಪ್ರಾ   

ಯೂಜೀನ್‌, ಅಮೆರಿಕ: ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ ಅವರುವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಜಾವೆಲಿನ್ ಥ್ರೋಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇಂದು (ಭಾನುವಾರ) ನಡೆದ ಫೈನಲ್‌ನಲ್ಲಿಭಾರತದ ನೀರಜ್‌, ತಮ್ಮ ನಾಲ್ಕನೇ ಪ್ರಯತ್ನದಲ್ಲಿ 88.13 ಮೀಟರ್‌ ದೂರ ಎಸೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಅವರುಅರ್ಹತಾ ಸುತ್ತಿನಲ್ಲಿಯೂ ಎರಡನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದ್ದರು.

ಇಡೀ ದೇಶದ ಚಿತ್ತ,ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಚೋಪ್ರಾ ಅವರ ಮೇಲಿತ್ತು.

ADVERTISEMENT

ಸ್ಪರ್ಧೆಯಲ್ಲಿಗ್ರೆನಾಡದ ಆ್ಯಂಡರ್ಸನ್‌ ಪೀಟರ್ಸ್‌ ಅವರುಚೋಪ್ರಾಗಿಂತ ಉತ್ತಮ ಸಾಧನೆ ತೋರಿದರು.ಪೀಟರ್ಸ್‌ 90.54 ಮೀಟರ್‌ ದೂರ ಎಸೆದುಚಿನ್ನದ ಪದಕ ಬಾಚಿಕೊಂಡಿದ್ದಾರೆ.ಚೆಕ್‌ ಗಣರಾಜ್ಯದ ಜಾಕೂಬ್‌ ವಾಡ್ಲೆಚ್‌ ಅವರು88.09 ದೂರ ಎಸೆಯುವುದರೊಂದಿಗೆ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದರು.

19 ವರ್ಷಗಳ ಬಳಿಕ ಪದಕ
ನೀರಜ್‌ ಚೋಪ್ರಾ ಅವರು ಬೆಳ್ಳಿ ಸಾಧನೆ ಮಾಡುವ ಮೂಲಕವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ 19 ವರ್ಷಗಳ ಬಳಿಕ ಭಾರತಕ್ಕೆ ಪದಕ ಗೆದ್ದುಕೊಟ್ಟರು.

2003ರಲ್ಲಿಮಹಿಳೆಯರ ಲಾಂಗ್ ಜಂಪ್‌ ಸ್ಪರ್ಧೆಯಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು. ಅದಾದ ಬಳಿಕ ಭಾರತಕ್ಕೆ ಪದಕ ಕೈಗೂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.