ADVERTISEMENT

ರಷ್ಯಾಕ್ಕೆ ₹ 24 ಕೋಟಿ ದಂಡ

ಏಜೆನ್ಸೀಸ್
Published 12 ಮಾರ್ಚ್ 2020, 19:35 IST
Last Updated 12 ಮಾರ್ಚ್ 2020, 19:35 IST

ಮೊನಾಕೊ: ವಿಶ್ವ ಉದ್ದೀಪನ ಮದ್ದು ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆ ಗುರುವಾರ ರಷ್ಯಾಕ್ಕೆ ₹ 24 ಕೋಟಿ ದಂಡ ವಿಧಿಸಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರಷ್ಯಾದ 10 ಮಂದಿ ಅಥ್ಲೀಟುಗಳಿಗೆ ಮಾತ್ರ ತಟಸ್ಥ ಧ್ವಜದಡಿ ಭಾಗವಹಿಸಲು ಅವಕಾಶ ನೀಡಿದೆ. ಇವರು ‘ಅಧಿಕೃತ ತಟಸ್ಥ ಅಥ್ಲೀಟುಗಳು’ ಹೆಸರಿನಲ್ಲಿ ಭಾಗವಹಿಸಬೇಕಾಗಿದೆ.

ದಂಡದ ಮೊತ್ತದಲ್ಲಿ ಅರ್ಧದಷ್ಟನ್ನು 2020ರ ಜುಲೈ ಒಂದರೊಳಗೆ ಪಾವತಿಸದಿದ್ದರೆ ಇವರಿಗೂ ಅವಕಾಶ ನೀಡುವುದಿಲ್ಲ ಎಂದು ವಿಶ್ವ ಅಥ್ಲೆಟಿಕ್ಸ್‌ ಅಧ್ಯಕ್ಷ ಸೆಬಾಸ್ಟಿಯನ್‌ ಕೊ ಎಚ್ಚರಿಸಿದ್ದಾರೆ.

ADVERTISEMENT

ಉಳಿದ ₹ 12 ಕೋಟಿಯಷ್ಟು ದಂಡದ ಮೊತ್ತವನ್ನು ಎರಡು ವರ್ಷಗಳ ವರೆಗೆ ಅಮಾನತಿನಲ್ಲಿಡಲಾಗಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.