ADVERTISEMENT

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಮೊದಲ ಪದಕ ಜಯಿಸಿದ್ದ ಕನ್ನಡಿಗ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 20:04 IST
Last Updated 25 ಆಗಸ್ಟ್ 2019, 20:04 IST
ಪ್ರಕಾಶ ಪಡುಕೋಣೆ
ಪ್ರಕಾಶ ಪಡುಕೋಣೆ   

ಬೆಂಗಳೂರು: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಪದಕ ಗೆದ್ದಿದ್ದು ಕನ್ನಡಿಗ ಪ್ರಕಾಶ ಪಡುಕೋಣೆ ಅವರು.

1983ರಲ್ಲಿ ಅವರು ಪುರುಷರ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಅದರೊಂದಿಗೆ ಆ ಸಾಧನೆ ಮಾಡಿದ್ದ ಮೊದಲ ಭಾರತೀಯ ಆಟಗಾರ ಎನಿಸಿದ್ದರು.

ಅವರ ನಂತರ ಮಹಿಳೆಯರ ವಿಭಾಗದಲ್ಲಿ ಸಿಂಧು, 2015 ಮತ್ತು 2017ರಲ್ಲಿ ಸೈನಾ ನೆಹ್ವಾಲ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದ್ದರು. ಮಹಿಳೆಯರ ಡಬಲ್ಸ್‌ನಲ್ಲಿ 2011ರಲ್ಲಿ ಜ್ವಾಲಾ ಗುಟ್ಟಾ ಮತ್ತು ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರ ಜೋಡಿಯು ಕಂಚಿನ ಪದಕ ಗಳಿಸಿತ್ತು.

ADVERTISEMENT

ಶನಿವಾರ ಪುರುಷರ ವಿಭಾಗದಲ್ಲಿ ಕಂಚು ಗೆದ್ದಿದ್ದ ಬಿ.ಸಾಯಿ ಪ್ರಣಿತ್ ಈ ಪಟ್ಟಿಯಲ್ಲಿ ಸೇರಿದ್ದರು.

ಸೈನಾ ಶುಭಾಶಯ: ಪಿ.ವಿ.ಸಿಂಧು ಅವರ ಸಾಧನೆ ಐತಿಹಾಸಿಕ. ವಿಶ್ವ ಚಾಂಪಿಯನ್‌ಷಿಪ್‌ನ ಚಿನ್ನ ಗೆದ್ದ ಮೊದಲ ಆಟಗಾರ್ತಿಗೆ ಶುಭಾಶಯ ಎಂದು ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.