ನಿಖತ್ ಜರೀನ್
ಲಿವರ್‌ಪೂಲ್: ಎರಡು ಬಾರಿಯ ಚಾಂಪಿಯನ್ ನಿಖತ್ ಜರೀನ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ 51 ಕೆ.ಜಿ. ವಿಭಾಗದಲ್ಲಿ ಕ್ವಾರ್ಟಲ್ ಫೈನಲ್ ಪ್ರವೇಶಿಸಿದರು.
ಶ್ರೇಯಾಂಕ ರಹಿತ ನಿಖತ್ ಅವರು ಮಂಗಳವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ 5–0ಯಿಂದ ಜಪಾನ್‌ನ ಯೂನಾ ನಿಶಿನಾಕಾ ಅವರನ್ನು ಮಣಿಸಿದರು. 29 ವರ್ಷ ವಯಸ್ಸಿನ ನಿಖತ್ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಎರಡು ಬಾರಿಯ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಬೂಸೆ ನಾಜ್ ಛಕುರೊಲೂ (ಟರ್ಕಿ) ಅವರ ಸವಾಲು ಎದುರಿಸಲಿದ್ದಾರೆ.
ಸುಮಿತ್ ಕುಂದು ನಿರ್ಗಮನ:
ಪುರುಷರ 75 ವಿಭಾಗದಲ್ಲಿ ಸ್ಪರ್ಧಿಸಿರುವ ಸುಮಿತ್ ಕುಂದು, ಸಚಿನ್ ಸಿವಾಚ್ (60 ಕೆ.ಜಿ.) ಹಾಗೂ ನರೇಂದ್ರ ಬರ್ವಾಲ್ (90+ ಕೆ.ಜಿ.) ಅವರು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಸೋತು ಅಭಿಯಾನ ಮುಗಿಸಿದರು.
ಸುಮಿತ್ 5–0ಯಿಂದ ಬಲ್ಗೇರಿಯಾದ ರಮಿ ಕಿವಾನ್ ಎದುರು ಪರಾಭವಗೊಂಡರೆ, ಏಷ್ಯನ್ ಗೇಮ್ಸ್ ಕಂಚು ವಿಜೇತ ನರೇಂದ್ರ ಅವರು 1–4ರಿಂದ ಇಟಲಿಯ ಡಿಯಾಗೊ ಲೆಂಝಿ ಅವರಿಗೆ ಮಣಿದರು. ಸಚಿನ್ ಅವರೂ 1–4ರಿಂದ ಕಜಾಕಸ್ತಾನದ ಬೀಬರ್ಸ್ ಜೆಕ್ಸೆನ್ ವಿರುದ್ಧ ಸೋಲನುಭವಿಸಿದರು.
ತೀವ್ರ ಪೈಪೋಟಿಯಿಂದ ಕೂಡಿದ್ದ ಮಹಿಳೆಯರ 65 ಕೆ.ಜಿ. ವಿಭಾಗದಲ್ಲಿ ನೀರಜ್ ಪೋಗಟ್ ಅವರು 2–3ರಿಂದ ಇಂಗ್ಲೆಂಡ್‌ನ ಸಚಾ ಹಿಕಿ ಎದುರು ಪರಾಭವಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.