ADVERTISEMENT

ವಿಶ್ವ ಚಾಂಪಿಯನ್‌ಷಿಪ್ 1500 ಮೀ. ಓಟ: ಐಸಾಕ್‌ಗೆ ಅಚ್ಚರಿಯ ಚಿನ್ನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 18:53 IST
Last Updated 17 ಸೆಪ್ಟೆಂಬರ್ 2025, 18:53 IST
<div class="paragraphs"><p>ಪೋರ್ಚುಗಲ್‌ನ ಐಸಾಕ್ ನಾಡೆರ್‌</p></div>

ಪೋರ್ಚುಗಲ್‌ನ ಐಸಾಕ್ ನಾಡೆರ್‌

   

ಕೃಪೆ: @Olympics

ಟೋಕಿಯೊ: ಅಂತಿಮ ಕ್ಷಣಗಳಲ್ಲಿ ಅಮೋಘವಾಗಿ ಓಡಿದ ಪೋರ್ಚುಗಲ್‌ನ ಐಸಾಕ್ ನಾಡೆರ್‌, ಬ್ರಿಸ್ಟನ್ ಜೇಕ್‌ ವೈಟ್‌ಮನ್ ಅವರನ್ನು ಕೂದಲೆಳೆ ಅಂತರದಲ್ಲಿ ಹಿಂದೆಹಾಕಿ ವಿಶ್ವ ಚಾಂಪಿಯನ್‌ಷಿಪ್‌ನ ಪುರುಷರ 1500 ಮೀ. ಓಟದಲ್ಲಿ ಅಚ್ಚರಿಯ ರೀತಿ ಚಿನ್ನ ಗೆದ್ದುಕೊಂಡರು.

ADVERTISEMENT

ಬುಧವಾರ ನಡೆದ ಈ ಓಟದಲ್ಲಿ ಐಸಾಕ್ 3ನಿ.34.10 ಸೆ.ಗಳಲ್ಲಿ ಗುರಿತಲುಪಿದ ಐಸಾಕ್‌, 2022ರ ವಿಶ್ವ ಚಾಂಪಿಯನ್‌ ಓಟಗಾರರನ್ನು ಸೆಕೆಂಡಿನ 200ನೇ ಒಂದು ಭಾಗದಿಂದ ಹಿಂದೆಹಾಕಿದರು.

ಕೇಟಿ ಮೂನ್‌ಗೆ ಚಿನ್ನ: ಅಮೆರಿಕದ ಕ್ಯಾಥಿ ಮೂನ್ ಮಹಿಳೆಯರ ವಿಭಾಗದ ಪೋಲ್‌ವಾಲ್ಟ್‌ನಲ್ಲಿ ಸತತ ಮೂರನೇ ಬಾರಿ ಚಿನ್ನ ಗೆದ್ದರು. 2021ರ ಒಲಿಂಪಿಕ್ ಚಾಂಪಿಯನ್ ಸಹ ಆಗಿರುವ ಅವರು 4.90 ಮೀ. ಎತ್ತರ ಜಿಗಿದರು. ಇದೇ ದೇಶದ ಸಾಂಡಿ ಮಾರಿಸ್ (4.85 ಮೀ.) ಬೆಳ್ಳಿ ಗೆದ್ದರು. ಕಂಚಿನ ಪದಕ ಸ್ಲೊವೇನಿಯಾದ ಟೀನಾ ಸುಟೆಜ್ (4.80 ಮೀ) ಪಾಲಾಯಿತು. ಹಾಲಿ ಒಲಿಂಪಿಕ್ ಚಾಂಪಿಯನ್ ನೀನಾ ಕೆನಡಿ (ಆಸ್ಟ್ರೇಲಿಯಾ) ಅವರು ಕಾಲಿನ ಸ್ನಾಯು ಸಮಸ್ಯೆಯ ಕಾರಣ ಇಲ್ಲಿಗೆ ಬಂದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.