ADVERTISEMENT

ವಿಶ್ವದ ಶ್ರೇಷ್ಠ ಪ್ಯಾರಾ ಅಥ್ಲೀಟುಗಳು ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 0:11 IST
Last Updated 27 ಸೆಪ್ಟೆಂಬರ್ 2025, 0:11 IST
<div class="paragraphs"><p>ಭಾರತದ ಪ್ಯಾರಾ ಅಥ್ಲೀಟ್‌ ದೀಪ್ತಿ ಜಿವಾಂಜಿ</p></div>

ಭಾರತದ ಪ್ಯಾರಾ ಅಥ್ಲೀಟ್‌ ದೀಪ್ತಿ ಜಿವಾಂಜಿ

   

ನವದೆಹಲಿ: ವಿಶ್ವದ ಶ್ರೇಷ್ಠ ಪ್ಯಾರಾ ಅಥ್ಲೀಟುಗಳು, ಶನಿವಾರ ಇಲ್ಲಿ ಆರಂಭವಾಗುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬತ್ತದ ಸ್ಫೂರ್ತಿ, ಉತ್ಸಾಹ ಮತ್ತು ಸಂಕಲ್ಪಶಕ್ತಿ ಪ್ರದರ್ಶಿಸಲು ಸಜ್ಜಾಗಿದ್ದಾರೆ.

ಪ್ಯಾರಾ ಅಥ್ಲೆಟಿಕ್ಸ್‌ ಸೇರಿದಂತೆ ಪ್ಯಾರಾ ಕ್ರೀಡೆಗಳಲ್ಲಿ ಪ್ರಬಲ ಶಕ್ತಿಯಾ ಗುತ್ತಿರುವ ಭಾರತವು 12ನೇ ಆವೃತ್ತಿಯ ಈ ಕೂಟವನ್ನು ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿದೆ. ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ವಿಶ್ವ ದರ್ಜೆಯ
ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. 27 ರಂದು ಆರಂಭವಾಗುವ ಈ ಚಾಂಪಿಯನ್‌ಷಿಪ್‌ ಅಕ್ಟೋಬರ್ 5ರವರೆಗೆ ನಡೆಯಲಿದೆ.

ADVERTISEMENT

104 ದೇಶಗಳ 2,200 ಅಥ್ಲೀಟುಗಳು, ತರಬೇತುದಾರರು ಮತ್ತು 104 ಅಧಿಕಾರಿಗಳು ಒಂಬತ್ತು ದಿನಗಳ ಈ ಕೂಟದಲ್ಲಿ ಭಾಗಿಯಾಗಲಿದ್ದಾರೆ. ಈ ಹಿಂದೆ ಏಷ್ಯಾದಲ್ಲಿ ಕತಾರ್ (2015), ಯುಎಇ (2019) ಮತ್ತು ಜಪಾನ್‌ (2024) ಈ ಕೂಟದ ಆತಿಥ್ಯ ವಹಿಸಿವೆ.

1500 ಅಥ್ಲೀಟುಗಳು 186 ಪದಕ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. 

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟು 308 ಪದಕಗಳನ್ನು (112 ಚಿನ್ನ, 96 ಬೆಳ್ಳಿ, 100 ಕಂಚು) ಗೆದ್ದ ಅಥ್ಲೀಟುಗಳು ಇಲ್ಲಿ ಕಣಕ್ಕಿಳಿಯುವುದರಿಂದ ಈ ಕೂಟದ ಗುಣಮಟ್ಟ ಹೆಚ್ಚಲಿದೆ. 

ಪುರುಷರಿಗೆ 101 ಸ್ಪರ್ಧೆಗಳು, ಮಹಿಳೆಯರಿಗೆ 84 ಸ್ಪರ್ಧೆಗಳು ನಡೆಯಲಿವೆ. ಒಂದು ಮಿಶ್ರ ವಿಭಾಗದ ಸ್ಪರ್ಧೆ ಇದೆ.

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಅಧ್ಯಕ್ಷ ಪಾಲ್‌ ಫಿಟ್ಜೆರಾಲ್ಡ್‌ ಅವರು ಇಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿದ್ದಕ್ಕೆ ಭಾರತವನ್ನು ಶ್ಲಾಘಿಸಿದರು.

ವಾರ್ಮ್‌ಅಪ್ ಪ್ರದೇಶಕ್ಕೂ ಎಲ್‌ಇಡಿ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಉತ್ಕೃಷ್ಟ ದರ್ಜೆಯ ಫಿಟ್ನೆಸ್‌ ಸೆಂಟರ್‌ ಸಹ ನಿರ್ಮಾಣವಾಗಿದೆ.

ಅಗ್ರ 5ರ ಗುರಿ: ಭಾರತ ಈ ಕೂಟದಲ್ಲಿ 74 ಅಥ್ಲೀಟುಗಳನ್ನು ಕಣಕ್ಕಿಳಿಸಿದೆ. ಇದು ಈವರೆಗಿನ ಅತಿ ದೊಡ್ಡ ತಂಡ. 20ಕ್ಕೂ ಅಧಿಕ ಪದಕಗಳನ್ನು ಗೆಲ್ಲುವ ವಿಶ್ವಾಸ ಭಾರತ ಪ್ಯಾರಾಲಿಂಪಿಕ್ಸ್‌ ಸಮಿತಿಗಿದೆ. 

ಪದಕ ಪಟ್ಟಿಯಲ್ಲಿ ಭಾರತ ಐದರೊಳಗೆ ಸ್ಥಾನ ಪಡೆಯುವ ಗುರಿ ಹೊಂದಿದೆ. 

2019ರಲ್ಲಿ ದುಬೈನಲ್ಲಿ ಭಾರತ 9 (2ಚಿನ್ನ, 2ಬೆಳ್ಳಿ, 5ಕಂಚು) ಪದಕ, 2023ರಲ್ಲಿ ಪ್ಯಾರಿಸ್‌ನಲ್ಲಿ 10 (3 ಚಿನ್ನ, 4 ಬೆಳ್ಳಿ, 3 ಕಂಚು), 2024ರಲ್ಲಿ ಕೋಬೆಯಲ್ಲಿ 17 ಪದಕ (6 ಚಿನ್ನ, 5 ಬೆಳ್ಳಿ, 6 ಕಂಚು) ಗೆದ್ದುಕೊಂಡಿತ್ತು. ಕೋಬೆ (ಜಪಾನ್) ಕೂಟದಲ್ಲಿ ಭಾರತ ಆರನೇ ಸ್ಥಾನ ಗಳಿಸಿತ್ತು.

ದೀಪ್ತಿ ಜಿವಾಂಜಿ (ಮಹಿಳೆಯರ 400 ಮೀ. ಟಿ20), ಸಚಿನ್ ಖಿಲಾರಿ (ಪುರುಷರ ಷಾಟ್‌ಪಟ್‌ ಎಫ್‌46), ಸುಮಿತ್‌, ಏಕ್ತಾ ಭಯಾನ್ (ಮಹಿಳೆಯರ ಕ್ಲಬ್ ಥ್ರೊ ಎಫ್‌51), ಸಿಮ್ರಾನ್ ಶರ್ಮಾ (ಮಹಿಳೆಯರ 200 ಮೀ, ಟಿ12) ಚಿನ್ನ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.