
ಐಶ್ವರಿ ಪ್ರಸಾದ್ ಸಿಂಗ್ ತೋಮಾರ್
ಪಿಟಿಐ ಚಿತ್ರ
ಕೈರೊ: ಒಲಿಂಪಿಯನ್ ಐಶ್ವರಿ ಪ್ರಸಾದ್ ಸಿಂಗ್ ತೋಮಾರ್ ಅವರು ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಪುರುಷರ 50 ಮೀ. ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ಅರ್ಹತಾ ಸುತ್ತಿನಲ್ಲಿ ವಿಶ್ವದಾಖಲೆ ಸರಿಗಟ್ಟಿದರು.
ಐಶ್ವರಿ ಅವರು 466.9 ಸ್ಕೋರ್‌ನೊಡನೆ ಎರಡನೇ ಸ್ಥಾನ ಗಳಿಸಿದರು. ಚೀನಾದ ಯುಕುನ್ ಲಿಯು (467.1) ಅವರು ಚಿನ್ನ ಗೆದ್ದರೆ, ಫ್ರಾನ್ಸ್‌ನ ರೊಮೇನ್ ಆಫ್ರೆರಿ (454.8) ಕಂಚಿನ ಪದಕ ಗಳಿಸಿದರು.
ಫೈನಲ್‌ನಲ್ಲಿದ್ದ ಭಾರತದ ಇನ್ನೊಬ್ಬ ಶೂಟರ್ ನೀರಜ್ ಕುಮಾರ್ (432.6) ಅವರು ಐದನೇ ಸ್ಥಾನ ಪಡೆದರು.
24 ವರ್ಷ ವಯಸ್ಸಿನ ಐಶ್ವರಿ ಪ್ರಸಾದ್ ಇದಕ್ಕೆ ಮೊದಲು ತಮ್ಮ ಸ್ಪರ್ಧೆಯ ಫೈನಲ್ ತಲುಪುವ ಮೊದಲು ಅರ್ಹತಾ ಸುತ್ತಿನಲ್ಲಿ ವಿಶ್ವ ದಾಖಲೆ (597–40x) ಸರಿಗಟ್ಟಿದರು. ನೀರಜ್ 592ರ ಸ್ಕೋರ್‌ನೊಡನೆ ಅಂತಿಮ ಸುತ್ತು ತಲುಪಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.