ADVERTISEMENT

ವಿಶ್ವ ಚೆಸ್‌: ಭಾರತಕ್ಕೆ ಮಿಶ್ರ ಫಲ

ಪಿಟಿಐ
Published 22 ನವೆಂಬರ್ 2022, 12:15 IST
Last Updated 22 ನವೆಂಬರ್ 2022, 12:15 IST
ವಿದಿತ್ ಗುಜರಾತಿ –ಟ್ವಿಟರ್ ಚಿತ್ರ
ವಿದಿತ್ ಗುಜರಾತಿ –ಟ್ವಿಟರ್ ಚಿತ್ರ   

ಜೆರುಸಲೆಂ: ಭಾರತ ತಂಡವು ಫಿಡೆ ವಿಶ್ವ ಟೀಮ್ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಮಿಶ್ರ ಫಲ ಕಂಡಿತು. ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಬಿ ಗುಂಪಿನ ಮೂರನೇ ಸುತ್ತಿನಲ್ಲಿ ಅಜರ್‌ಬೈಜಾನ್ ಎದುರು ಗೆದ್ದರೆ, ನಾಲ್ಕನೇ ಸುತ್ತಿನಲ್ಲಿ ಉಜ್ಬೆಕಿಸ್ತಾನಕ್ಕೆ ತಂಡಕ್ಕೆ ಮಣಿಯಿತು.

ಸೋಮವಾರ ರಾತ್ರಿ ನಡೆದ ಅಜರ್‌ಬೈಜಾನ್‌ ವಿರುದ್ಧದ ಸೆಣಸಾಟದ ಮೊದಲ ಪಂದ್ಯದಲ್ಲಿ ಭಾರತದ ವಿದಿತ್ ಸಂತೋಷ್‌ ಗುಜರಾತಿ ಅವರು ತನಗಿಂತ ಮೇಲಿನ ರ‍್ಯಾಂಕ್‌ನ ಶಕ್ರಿಯಾರ್‌ ಮಮೆದ್ಯರೊವ್ ಎದುರು ಗೆದ್ದರು. ಉಳಿದ ಮೂರು ಪಂದ್ಯಗಳಲ್ಲಿ ಆಡಿದ ನಿಹಾಲ್‌ ಸರಿನ್‌, ಎಸ್‌.ಎಲ್‌. ನಾರಾಯಣನ್‌ ಮತ್ತು ಕೆ. ಶಶಿಕಿರಣ್‌ ಡ್ರಾ ಮಾಡಿಕೊಂಡರು. ತಂಡವು 2.5–1.5ನಿಂದ ಗೆಲುವು ಒಲಿಸಿಕೊಂಡಿತು.

ಉಜ್ಬೆಕಿಸ್ತಾನ ಎದುರಿನ ಪಂದ್ಯದಲ್ಲಿ ಭಾರತ 0.5–3.5ರಿಂದ ಸೋಲು ಕಂಡಿತು. ನಾರಾಯಣನ್‌ ಮಾತ್ರ ಡ್ರಾ ಸಾಧಿಸಿದರು. ವಿದಿತ್‌, ಸರಿನ್‌ ಮತ್ತು ಅಭಿಜೀತ್ ಗುಪ್ತಾ ಎದುರಾಳಿಗಳ ವಿರುದ್ಧ ಸೋಲನುಭವಿಸಿದರು.

ADVERTISEMENT

ಈ ಫಲಿತಾಂಶಗಳೊಂದಿಗೆ ಭಾರತದ ಕ್ವಾರ್ಟರ್‌ಫೈನಲ್ ಆಸೆ ಕ್ಷೀಣಿಸಿದೆ. ಬಿ ಗುಂಪಿನಿಂದ ಉಜ್ಬೆಕಿಸ್ತಾನ ಮಾತ್ರ ಎಂಟರಘಟ್ಟ ತಲುಪುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.