ಸಮಕೋವ್ (ಬಲ್ಗೇರಿಯಾ): ಶ್ರುತಿ ಸಾರಿಕಾ ಮತ್ತು ಕಾಜಲ್ ಅವರು ತಮ್ಮತಮ್ಮ ತೂಕ ವಿಭಾಗಗಳಲ್ಲಿ ಸೆಮಿಫೈನಲ್‌ಗೆ ತಲುಪುವ ಮೂಲಕ ಭಾರತ ತಂಡವು, ವಿಶ್ವ 20 ವರ್ಷದೊಳಗಿವರ ಕುಸ್ತಿ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದಲ್ಲಿ ಉತ್ತಮ ನಿರ್ವಹಣೆ ಮುಂದುವರಿಸಿದೆ.
ಗ್ರೀಕೊ ರೋಮನ್ ವಿಭಾಗದ 60 ಕೆ.ಜಿ. ಸ್ಪರ್ಧೆಯಲ್ಲಿ ಸೂರಜ್ ಕೂಡ ಸೆಮಿಫೈನಲ್ ತಲುಪಿದ್ದಾರೆ. ಆದರೆ 82 ಕೆ.ಜಿ. ವಿಭಾಗದಲ್ಲಿ ಪ್ರಿನ್ಸ್, ಕ್ವಾರ್ಟರ್‌ಫೈನಲ್‌ನಲ್ಲಿ ನಿರ್ಗಮಿಸಿದರು.
ಮಹಿಳಾ ವಿಭಾಗದ ಅತಿಕಡಿಮೆ ತೂಕವಿಭಾಗದ 50 ಕೆ.ಜಿ. ಸ್ಪರ್ಧೆಯ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಶ್ರುತಿ 5–4 ರಿಂಧ ವಯ್ಲೆಟ್ಟಾ ಬಿರಿಯುಕೊವಾ ಅವರನ್ನು ಮಣಿಸಿದರು. ನಂತರ 4–0 ಯಿಂದ ಪೋಲೆಂಡ್‌ನ ಅನ್ನಾ ಯಟ್ಸೆಕೆವಿಚ್ ಅವರನ್ನು ಅಧಿಕಾರಯುತವಾಗಿ ಮಣಿಸಿದರು.
53 ಕೆ.ಜಿ. ಸ್ಪರ್ಧೆಯ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಸಾರಿಕಾ ಸೆವ್ವಲ್ ಕಯಿರ್ ಅವರನ್ನು ತಾಂತ್ರಿಕ ಶ್ರೇಷ್ಠತೆ (12–2) ಆಧಾರದಲ್ಲಿ ಸೋಲಿಸಿದರು. ಬಳಿಕ ಎಂಟರ ಘಟ್ಟದಲ್ಲಿ ಚೀನಾದ ಟಿಯಾನಿಯು ಸುನ್ ಅವರನ್ನು 8–0 ಯಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಅವರ ಎದುರಾಳಿ ಉಕ್ರೇನಿನ ಅನಸ್ತೇಷಿಯಾ ಪೋಲ್‌ಸ್ಕಾ.
72 ಕೆ.ಜಿ. ವಿಭಾಗದಲ್ಲಿ ಕಾಜಲ್, 16ರ ಸುತ್ತಿನಲ್ಲಿ ಎಮಿಲಿ ಮಿಹೆಲೋವಾ ಅಪೊಸ್ಟಲೋವಾ ಅವರನ್ನು 15–4 ರಿಂದ ಸುಲಭವಾಗಿ ಸೋಲಿಸಿದರು. ನಂತರ ಕಿರ್ಗಿಸ್ತಾನದ ಕೈರುಕುಲ್ ಶರ್ಶೆಬಯೇವಾ ಅವರನ್ನು 7–0 ಯಿಂದ ಸೋಲಿಸಿದರು. ಅವರು ಸೆಮಿಫೈನಲ್‌ನಲ್ಲಿ ಅಮೆರಿಕದ ಜಾಸ್ಮಿನ್ ಡೊಲೊರೆಸ್ ರಾಬಿನ್ಸನ್ ಅವರನ್ನು ಎದುರಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.