ADVERTISEMENT

ನಾನು ಬದುಕಿದ್ದೇನೆ: ಹತ್ಯೆ ವದಂತಿ ವೈರಲ್ ಆಗುತ್ತಿದ್ದಂತೆ ನಿಶಾ ದಹಿಯಾ ಸ್ಪಷ್ಟನೆ

ಪಿಟಿಐ
Published 10 ನವೆಂಬರ್ 2021, 16:00 IST
Last Updated 10 ನವೆಂಬರ್ 2021, 16:00 IST
ಗುಂಡಿನ ದಾಳಿ: ರಾಷ್ಟ್ರಮಟ್ಟದ ಕುಸ್ತಿ ಪಟು ನಿಶಾ ದಹಿಯಾ, ಸಹೋದರನ ಹತ್ಯೆ
ಗುಂಡಿನ ದಾಳಿ: ರಾಷ್ಟ್ರಮಟ್ಟದ ಕುಸ್ತಿ ಪಟು ನಿಶಾ ದಹಿಯಾ, ಸಹೋದರನ ಹತ್ಯೆ   

ನವದೆಹಲಿ: ರಾಷ್ಟ್ರಮಟ್ಟದಕುಸ್ತಿ ಪಟು ನಿಶಾ ದಹಿಯಾ ಮತ್ತು ಅವರ ಸಹೋದರ ಸೂರಜ್ ಅವರುಹರಿಯಾಣದ ಸೋನಿಪತ್‌ನಲ್ಲಿ ನಡೆದ ಗುಂಡಿನದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂಬುದು ಸುಳ್ಳು ಸುದ್ದಿ.

ತಮ್ಮ ಸಾವಿನ ವದಂತಿ ವೈರಲ್ ಆಗುತ್ತಿದ್ದಂತೆಸ್ವತಃ ನಿಶಾ ದಹಿಯಾ ವಿಡಿಯೊ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ನನ್ನ ಮುಂದಿನ ಪಂದ್ಯಕ್ಕಾಗಿ ಸದ್ಯ ಗೊಂಡದಲ್ಲಿದ್ದು, ನಾನು ಚೆನ್ನಾಗಿದ್ದೇನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ನಿಶಾ ಹೇಳಿದ್ದಾರೆ.

ADVERTISEMENT

ನಿಶಾ ದಹಿಯಾ ಎಂಬ ಹೆಸರಿನ ವಿಶ್ವವಿದ್ಯಾಲಯ ಮಟ್ಟದ ಕುಸ್ತಿ ಪಟು ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದು, ರಾಷ್ಟ್ರಮಟ್ಟದ ಕುಸ್ತಿ ಪಟು ನಿಶಾ ದಹಿಯಾ ಸಾವಿಗೀಡಾಗಿದ್ದಾರೆ ಎಂದು ಸುದ್ದಿ ಹರಡಿತ್ತು. ಇಬ್ಬರ ಹೆಸರು ಒಂದೇ ಆಗಿದ್ದರಿಂದ ಗೊಂದಲ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.