ADVERTISEMENT

ಒಲಿಂಪಿಕ್ಸ್ ಅರ್ಹತೆ: ಸೋಫಿಯಾಕ್ಕೆ ಕುಸ್ತಿಪಟುಗಳು

ಪಿಟಿಐ
Published 30 ಏಪ್ರಿಲ್ 2021, 16:25 IST
Last Updated 30 ಏಪ್ರಿಲ್ 2021, 16:25 IST
ರವಿ ದಹಿಯಾ ಮತ್ತು ಬಜರಂಗ್ ಪುನಿಯಾ– ಪಿಟಿಐ ಚಿತ್ರ
ರವಿ ದಹಿಯಾ ಮತ್ತು ಬಜರಂಗ್ ಪುನಿಯಾ– ಪಿಟಿಐ ಚಿತ್ರ   

ನವದೆಹಲಿ: ಒಲಿಂಪಿಕ್ಸ್ ಅರ್ಹತೆ ಗಳಿಸಲು ಕೊನೆಯ ಅವಕಾಶವಾಗಿದ್ದ ವಿಶ್ವ ಕ್ವಾಲಿಫೈಯರ್ಸ್‌ನಲ್ಲಿ ಭಾಗವಹಿಸಲು ಭಾರತದ ಕುಸ್ತಿಪಟುಗಳು ಶುಕ್ರವಾರ ಬಲ್ಗೇರಿಯಾದ ಸೋಫಿಯಾ ತಲುಪಿದರು. ಪ್ರಯಾಣ ನಿರ್ಬಂಧದ ಕಾರಣ ಈ ಮೊದಲು ವಿಮಾನ ತಪ್ಪಿಸಿಕೊಂಡಿದ್ದರುು.

ಕೋವಿಡ್‌ ಪ್ರಕರಣಗಳು ಏರು ಗತಿಯಲ್ಲಿ ಸಾಗುತ್ತಿರುವುದರಿಂದ ಹಲವು ದೇಶಗಳು ಭಾರತದ ಮೇಲೆ ಪ್ರಯಾಣ ನಿರ್ಬಂಧ ಹೇರಿವೆ. ಮೇ ಆರರಿಂದ ಆರಂಭವಾಗುವ ಟೂರ್ನಿಗೆ ಭಾರತದ ಕುಸ್ತಿಪಟುಗಳು ಬುಧವಾರ ಆ್ಯಮ್‌ಸ್ಟರ್‌ಡ್ಯಾಮ್ ಮೂಲಕ ಸೋಫಿಯಾಗೆ ತೆರಳಬೇಕಿತ್ತು. ಆದರೆ ಡಚ್‌ ವಿಮಾನಯಾನ ಸಂಸ್ಥೆ ಅವರ ಟಿಕೆಟ್‌ಗಳನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿತ್ತು. ಬಳಿಕ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಪ್ಯಾರಿಸ್ ಮೂಲಕ ತೆರಳಲು ಟಿಕೆಟ್‌ಗಳನ್ನು ವ್ಯವಸ್ಥೆ ಮಾಡಿಕೊಟ್ಟಿತು.

‘ನೆದರ್ಲೆಂಡ್ಸ್ ಮತ್ತು ಫ್ರಾನ್ಸ್‌ನಲ್ಲಿರುವ ನಮ್ಮ ದೇಶದ ರಾಯಭಾರ ಕಚೇರಿಗಳ ಮೂಲಕ ಪ್ರಯಾಣ ನಿರ್ಬಂಧದಿಂದ ವಿನಾಯಿತಿ ಪಡೆದೆವು‘ ಎಂದು ಡಬ್ಲ್ಯುಎಫ್‌ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.