ADVERTISEMENT

17 ಬಾರಿ WWE ವಿಶ್ವ ಚಾಂಪಿಯನ್: 23 ವರ್ಷಗಳ ವೃತ್ತಿಜೀವನಕ್ಕೆ ಜಾನ್ ಸೀನಾ ತೆರೆ

ಏಜೆನ್ಸೀಸ್
Published 14 ಡಿಸೆಂಬರ್ 2025, 7:45 IST
Last Updated 14 ಡಿಸೆಂಬರ್ 2025, 7:45 IST
<div class="paragraphs"><p>ಜಾನ್‌ ಸೀನಾ</p></div>

ಜಾನ್‌ ಸೀನಾ

   

ನವದೆಹಲಿ: ಡಬ್ಲ್ಯೂಡಬ್ಲ್ಯೂಇ ಸೂಪರ್‌ಸ್ಟಾರ್‌, 17 ಬಾರಿ ಚಾಂಪಿಯನ್‌ ಆಗಿರುವ ಜಾನ್‌ ಸೀನಾ ಅವರು ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಶನಿವಾರ ರಾತ್ರಿ ಗುಂಥರ್ ವಿರುದ್ಧ ನಡೆದ ವಿದಾಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಜಾನ್‌ ಸೀನಾ ಅದ್ಭುತ ಕುಸ್ತಿ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

ADVERTISEMENT

ಸೀನಾ ಅವರ 23 ವರ್ಷಗಳ ಅದ್ಭುತ ವೃತ್ತಿಜೀವನಕ್ಕೆ ಸೂಕ್ತವಾದ ಬೀಳ್ಕೊಡುಗೆ ಸಿಗಬೇಕು ಎಂದು ಅಭಿಮಾನಿಗಳು ಬಯಸಿದ್ದರು. ಆದರೆ, ವಿದಾಯ ಪಂದ್ಯವನ್ನು ಸೋತಿದ್ದರಿಂದ ವಿಶ್ವದಾದ್ಯಂತ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.

2024ರಲ್ಲಿ ನಡೆದ ಲಾಸ್ ಏಂಜಲೀಸ್‌ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಬೆಸ್ಟ್ ಕಾಸ್ಟೂಮ್ ಡಿಸೈನರ್‘ ಪ್ರಶಸ್ತಿ ಘೋಷಣೆ ವೇಳೆ ಜಾನ್ ಸೀನಾ ಬೆತ್ತಲೆಯಾಗಿ ವೇದಿಕೆಗೆ ಬಂದಿದ್ದರು. ಜಾನ್‌ ಸೀನಾ ಅವತಾರ ಕಂಡು ಗ್ಯಾಲರಿಯಲ್ಲಿ ಕುಳಿತಿದ್ದವರು ಅವಕ್ಕಾಗಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.