ಬೆಂಗಳೂರು: ರಾಜ್ಯದ ಯಶಸ್ವಿನಿ ಘೋರ್ಪಡೆ ಅವರು ಸ್ಲೊವೇನಿಯಾದಲ್ಲಿ ನಡೆದ ಡಬ್ಲ್ಯುಟಿಟಿ ಯೂಥ್ ಕಂಟೆಂಡರ್ ಟೇಬಲ್ ಟೆನಿಸ್ ಟೂರ್ನಿಯ 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.
ಶುಕ್ರವಾರ ನಡೆದ ಫೈನಲ್‌ನಲ್ಲಿ ಯಶಸ್ವಿನಿ 11-8, 11-13, 7-11, 11-6, 3-11ರಲ್ಲಿ ರೊಮೇನಿಯಾದ ಎಲೆನಾ ಜಹಾರಿಯಾ ವಿರುದ್ಧ ಸೋತರು. ಸೆಮಿಫೈನಲ್‌ನಲ್ಲಿ ಅವರು ಉಕ್ರೇನ್‌ನ ವೆರೋನಿಕಾ ಮುಟಿಯುನಿಯಾ ಎದುರು11-2, 11-7, 11-8ರಲ್ಲಿ ಜಯ ಗಳಿಸಿದರು.
ಎಂಟರ ಘಟ್ಟದಲ್ಲಿ ಜರ್ಮನಿಯ ಲೌರಾ ಕೈಮ್ ವಿರುದ್ಧ11-7, 11-5, 11-4ರಲ್ಲಿ ಗೆಲುವು ಸಾಧಿಸಿದ ಯಶಸ್ವಿನಿ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ರೊಮೇನಿಯಾದ ಇಯೋನಾ ಸಿಂಗೆರ್ಜನ್ ವಿರುದ್ಧ11-3, 7-11, 11-7, 13-11ರಲ್ಲಿ ಮತ್ತು ಮೊದಲ ಸುತ್ತಿನಲ್ಲಿ ರಷ್ಯಾದ ಅನಸ್ತೇಸಿಯಾ ಬೆರೆಸ್ನೇವ ವಿರುದ್ಧ 11-9, 11-7, 11-4ರಲ್ಲಿ ಜಯ ಸಾಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.