ADVERTISEMENT

ಉದ್ಯಮಿ ಗೌತಮ್‌ ಅದಾನಿ ಭೇಟಿಯಾದ ವಿಶ್ವ ಚೆಸ್‌ ಚಾಂಪಿಯನ್‌ ಗುಕೇಶ್

ಪಿಟಿಐ
Published 2 ಜನವರಿ 2025, 11:39 IST
Last Updated 2 ಜನವರಿ 2025, 11:39 IST
<div class="paragraphs"><p>ಗೌತಮ್‌ ಅದಾನಿ ಭೇಟಿಯಾದ ವಿಶ್ವ ಚೆಸ್‌ ಚಾಂಪಿಯನ್‌ ಗುಕೇಶ್</p></div>

ಗೌತಮ್‌ ಅದಾನಿ ಭೇಟಿಯಾದ ವಿಶ್ವ ಚೆಸ್‌ ಚಾಂಪಿಯನ್‌ ಗುಕೇಶ್

   

ಚಿತ್ರ ಕೃಪೆ: ಎಕ್ಸ್‌ @gautam_adani

ನವದೆಹಲಿ: ವಿಶ್ವ ಚೆಸ್‌ ಚಾಂಪಿಯನ್‌ ಗುಕೇಶ್‌ ದೊಮ್ಮರಾಜು ಅವರು ಬಿಲಿಯನೇರ್‌ ಗೌತಮ್ ಅದಾನಿ ಅವರನ್ನು ಗುರುವಾರ ಭೇಟಿಯಾದರು.

ADVERTISEMENT

ಅಹಮದಾಬಾದ್‌ನಲ್ಲಿ ಪೋಷಕರೊಂದಿಗೆ ಗುಕೇಶ್‌ ಅದಾನಿ ಅವರನ್ನು ಭೇಟಿಯಾಗಿದ್ದಾರೆ.

ವಿಶ್ವ ಚೆಸ್‌ ಚಾಂಪಿಯನ್‌ ಆದ ಕಥೆಯನ್ನು ಗುಕೇಶ್‌ ಅವರಿಂದ ಕೇಳುವುದೇ ವಿಶೇಷ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅದಾನಿ, ‘ಗುಕೇಶ್‌ ಅವರನ್ನು ಭೇಟಿಯಾಗುವುದರ ಜತೆಗೆ, ಮಗನ ಯಶಸ್ಸಿಗಾಗಿ ಹಲವು ತ್ಯಾಗಗಳನ್ನು ಮಾಡಿದ ತಂದೆತಾಯಿ ಡಾ. ರಜಿನಿಕಾಂತ್‌ ಮತ್ತು ಡಾ. ಪದ್ಮಾವತಿ ಅವರನ್ನು ಭೇಟಿಯಾಗಿರುವುದು ಅಷ್ಟೇ ಸ್ಪೂರ್ತಿದಾಯಕವಾಗಿದೆ. ಕೇವಲ 18 ವರ್ಷಕ್ಕೆ ಗುಕೇಶ್‌ ತಮ್ಮ ಬುದ್ಧಿಶಕ್ತಿಯಿಂದ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಯುವ ಜನರಿಗೆ ಸ್ಪೂರ್ತಿಯಾಗಿದ್ದಾರೆ’ ಎಂದು ಅದಾನಿ ಹೇಳಿದ್ದಾರೆ.

ವಿಶ್ವ ಚಾಂಪಿಯನ್ ಆದ ಸಂದರ್ಭದಲ್ಲಿ ‘ಇತಿಹಾಸ ನಿರ್ಮಿಸಿದ ಗುಕೇಶ್‌’ ಎಂದು ಅದಾನಿ ಹೇಳಿದ್ದರು.

ಕಳೆದ ತಿಂಗಳು ಸಿಂಗಪುರದಲ್ಲಿ ನಡೆದ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಚೀನಾ ಡಿಂಗ್‌ ಲಿರೇನ್‌ ಅವರನ್ನು 14 ಪಂದ್ಯಗಳಲ್ಲೂ ಪರಾಭವಗೊಳಿಸಿ 18ನೇ ವಿಶ್ವ ಚಾಂಪಿಯನ್‌ ಆಗಿದ್ದಾರೆ.

ಗುಕೇಶ್‌ ಅವರಿಗೆ ಭಾರತ ಸರ್ಕಾರ ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಯನ್ನು ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.