ADVERTISEMENT

ಬಾಕ್ಸಿಂಗ್‌: ಎಂಟರಘಟ್ಟಕ್ಕೆ ವಂಶಜ್‌, ವಿಶ್ವನಾಥ್‌

ಪಿಟಿಐ
Published 20 ನವೆಂಬರ್ 2022, 13:57 IST
Last Updated 20 ನವೆಂಬರ್ 2022, 13:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ವಿಶ್ವನಾಥ್ ಸುರೇಶ್ ಮತ್ತು ವಂಶಜ್ ಸೇರಿದಂತೆಭಾರತದ ಎಂಟು ಮಂದಿ ಬಾಕ್ಸರ್‌ಗಳು, ಸ್ಪೇನ್‌ನ ಲಾ ನೂಸಿಯಾದಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

ವಿಶ್ವನಾಥ್‌ 48 ಕೆಜಿ ವಿಭಾಗದಲ್ಲಿ ಮತ್ತು ವಂಶಜ್‌ 63.5 ಕೆಜಿ ವಿಭಾಗದಲ್ಲಿ ಎಂಟರಘಟ್ಟ ತಲು‍ಪಿದರು. ಜಾದೂಮಣಿ ಸಿಂಗ್‌ (51 ಕೆಜಿ), ಆಶಿಶ್‌ (54 ಕೆಜಿ), ದೀಪಕ್‌ (75 ಕೆಜಿ), ಮಹಿಳೆಯರ ವಿಭಾಗದಲ್ಲಿ ಭಾವನಾ ಶರ್ಮಾ (48 ಕೆಜಿ), ತಮನ್ನಾ (50 ಕೆಜಿ) ಮತ್ತು ಗ್ರಿವಿಯಾ ದೇವಿ (54 ಕೆಜಿ) ಕ್ವಾರ್ಟರ್‌ಫೈನಲ್ ತಲುಪಿದ ಇನ್ನುಳಿದ ಬಾಕ್ಸರ್‌ಗಳು.

ಪ್ರೀಕ್ವಾರ್ಟರ್‌ ಹಣಾಹಣಿಗಳಲ್ಲಿ ವಿಶ್ವನಾಥ್‌ 5–0ಯಿಂದ ಇಟಲಿಯ ಅಟ್ರಾಟಿವೊ ಸ್ಯಾಲ್ವಟೊರ್ ವಿರುದ್ಧ, ವಂಶಜ್‌ ಇಷ್ಟೇ ಅಂತರದಿಂದ ಸ್ಪೇನ್‌ನ ಕುಕುಲೊವ್‌ ಎನ್ರಿಕ್ ಅವರನ್ನು ಪರಾಭಗೊಳಿಸಿದರು. ಜಾದೂಮಣಿ ಸಿಂಗ್‌ ಮತ್ತು ಆಶಿಶ್‌ ಕ್ರಮವಾಗಿ ಸ್ಪೇನ್‌ನ ಜಿಮೆನೆಜ್‌ ಅಸಿರ್‌ ಮತ್ತು ಫಿಲಿಪ್ಪೀನ್ಸ್‌ನ ಪಮಿಸಾ ಐಜಯ್‌ ಅವರನ್ನು ಏಕಪಕ್ಷೀಯ ಬೌಟ್‌ನಲ್ಲಿ ಸೋಲಿಸಿದರು. ದೀಪಕ್‌ 5–0ಯಿಂದ ಅರ್ಜೆಂಟೀನಾದ ಲಿವಾ ಅಂಟೋನಿಯೊ ಅವರನ್ನು ಮಣಿಸಿದರು.

ADVERTISEMENT

ಭಾವನಾ ಮತ್ತು ತಮನ್ನಾ ಕ್ರಮವಾಗಿ ಪೋಲೆಂಡ್‌ನ ಒಲಿವಿಯಾ ಜುಜನ್ನಾ ಮತ್ತು ಫಿನ್ಲೆಂಡ್‌ನ ಪಿಯಾ ಜಾರ್ವಿನೆನ್ ವಿರುದ್ಧ ಆರ್‌ಎಸ್‌ಸಿ (ರೆಫರಿಯಿಂದ ಪಂದ್ಯ ಸ್ಥಗಿತ) ಆಧಾರದಲ್ಲಿ ಗೆದ್ದರು.

ಗ್ರಿವಿಯಾ ದೇವಿ 5–0ಯಿಂದ ರುಮೇನಿಯಾದ ಅನ್ನಾ ಮರಿಯಾ ಸವಾಲು ಮೀರಿದರು.

67 ಕೆಜಿ ವಿಭಾಗದಲ್ಲಿ ಅಮನ್ ರಾಥೋಡ್‌ ಮಾತ್ರ 2–3ರಿಂದ ಇರಾಕ್‌ನ ಯೂಸಿಫ್‌ ಹುಸೇನ್ ಎದುರು ಸೋಲು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.