ADVERTISEMENT

ವಿಶ್ವ ಚಾಂಪಿಯನ್‌ಗೆ ನಿಖತ್ ಜರೀನ್ ಪೆಟ್ಟು

ಪಿಟಿಐ
Published 18 ಮಾರ್ಚ್ 2021, 13:09 IST
Last Updated 18 ಮಾರ್ಚ್ 2021, 13:09 IST
ನಿಖತ್ ಜರೀನ್–ಪಿಟಿಐ ಚಿತ್ರ
ನಿಖತ್ ಜರೀನ್–ಪಿಟಿಐ ಚಿತ್ರ   

ನವದೆಹಲಿ: ವಿಶ್ವ ಚಾಂಪಿಯನ್‌ ಪಲ್ಸೇವಾ ಎಕಟೇರಿನಾಗೆ ಆಘಾತ ನೀಡಿದ ಭಾರತದ ನಿಖತ್ ಜರೀನ್‌ ಅವರು ಇಸ್ತಾಂಬುಲ್‌ನಲ್ಲಿ ನಡೆಯುತ್ತಿರುವ ಬೋಸ್ಫೋರಸ್ ಬಾಕ್ಸಿಂಗ್ ಟೂರ್ನಿಯ ಮಹಿಳೆಯರ 51 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ನಿಖತ್ ಟೂರ್ನಿಯ ಎರಡನೇ ದಿನವಾದ ಬುಧವಾರ ರಾತ್ರಿ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾದ ಬಾಕ್ಸಿಂಗ್ ಪಟುವನ್ನು 5–0ಯಿಂದ ಮಣಿಸಿದರು. ಮುಂದಿನ ಸುತ್ತಿನಲ್ಲೂ ನಿಖತ್‌ಗೆ ಕಠಿಣ ಪೈಪೋಟಿ ಎದುರಾಗಿದ್ದು ಎರಡು ಬಾರಿಯ ವಿಶ್ವ ಚಾಂಪಿಯನ್‌ ಕಜಕಸ್ತಾನದ ಕೈಜೈಯ್‌ಬೇ ನಜೀಮ್ ಎದುರು ಸೆಣಸುವರು.

ಭಾರತದ ಶಿವ ಥಾಪ, ಸೋನಿಯಾ ಲಾಥರ್ ಮತ್ತು ಪರ್ವೀನ್‌ ಕೂಡ ತಮ್ಮ ವಿಭಾಗಗಳಲ್ಲಿ ಜಯ ಗಳಿಸಿ ಎಂಟರ ಘಟ್ಟ ಪ್ರವೇಶಿಸಿದರು. 2013ರ ಏಷ್ಯನ್ ಚಾಂಪಿಯನ್‌ ಥಾಪಾ 63 ಕೆಜಿ ವಿಭಾಗದ ಬೌಟ್‌ನಲ್ಲಿ 3–2ರಲ್ಲಿ ಕಜಕಸ್ತಾನದ ಸ್ಮಗುಲೊವ್ ಭಗ್ಟಿಯೊವ್‌ ವಿರುದ್ಧ ಜಯ ಗಳಿಸಿದರು.

ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಲಾಥರ್ 57 ಕೆಜಿ ವಿಭಾಗದಲ್ಲಿ ಸುರ್ಮೆನಲಿ ತುಗ್ಸೆನವ್ ವಿರುದ್ಧ 5-0ಯಿಂದ ಜಯ ಗಳಿಸಿದರು. 60 ಕೆಜಿ ವಿಭಾಗದಲ್ಲಿ ಪರ್ವೀನ್‌, ಒಜಿಯೋಲ್ ಎಸ್ರಾ ವಿರುದ್ಧ 5–0ಯಿಂದ ಜಯ ಗಳಿಸಿದರು. ಆದರೆ ದುರ್ಯೋಧನ್ ನೇಗಿ, ಬ್ರಿಜೇಶ್ ಯಾದವ್ ಮತ್ತು ಕೃಷ್ಣ ಶರ್ಮಾ ಸೋತು ಹೊರಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.