ADVERTISEMENT

ಬೇಜವಾಬ್ದಾರಿ ಪಾಲಕರು ರೋಹಿತ್ ಶರ್ಮಾ ದಂಪತಿ!

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 4:05 IST
Last Updated 16 ಜುಲೈ 2019, 4:05 IST
   

ಮುಂಬೈ: ವಿಶ್ವಕಪ್ ಟೂರ್ನಿಯಲ್ಲಿ ಐದು ಶತಕ ಗಳಿಸಿ ವಿಶ್ವದಾಖಲೆ ಬರೆದ ಭಾರತದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ಭಾನುವಾರ ಬೆಳಗಿನ ಜಾವ ಮುಂಬೈಗೆ ಮರಳಿದರು. ಆದರೆ, ವಿಮಾನ ನಿಲ್ದಾಣದಿಂದಲೇ ಅವರು ಟೀಕೆಗಳನ್ನು ಎದುರಿಸಬೇಕಾಯಿತು.

ಅಚ್ಚರಿಯೆಂದರೆ ತಂಡದ ಸೋಲಿನ ಕುರಿತ ಯಾವ ಟೀಕೆಯೂ ಅದರಲ್ಲಿ ಇರಲಿಲ್ಲ. ಬದಲಿಗೆ ರೋಹಿತ್ ಮತ್ತು ರಿತಿಕಾ ಸಜ್ದೆ ದಂಪತಿಯು ’ಬೇಜವಾಬ್ದಾರಿ ಪಾಲಕರು’ ಎಂಬ ಟೀಕೆಗೆ ಗುರಿಯಾದರು. ವಿಮಾನ ನಿಲ್ದಾಣದಿಂದ ಹೊರಬಂದ ಅವರು ತಮ್ಮ ಎಸ್‌ಯುವಿ ಕಾರ್‌ ಅನ್ನು ಚಾಲನೆ ಮಾಡಲು ಅಣಿಯಾದರು.

ಚಾಲಕನ ಪಕ್ಕದ ಆಸನದಲ್ಲಿ ರಿತಿಕಾ ಅವರು ತಮ್ಮ ಮಗು ಸಮೈರಾಳನ್ನು ತಮ್ಮ ಕಾಲುಗಳ ಮೇಲೆ ಕೂರಿಸಿಕೊಂಡು ಕುಳಿತರು.

ADVERTISEMENT

ಇದನ್ನು ನೋಡಿದ ಟೋನಿ ಎಂಬುವವರು, ‘ಮೂರ್ಖತನ ಮಾಡಬೇಡಿ. ಮಗುವಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿಕೊಂಡಿಲ್ಲವೇಕೆ?’ ಎಂದು ಟ್ವೀಟ್ ಮಾಡಿದರು.ಅದರ ಬೆನ್ನಲ್ಲಿಯೇ ಹಲವರು ಅದಕ್ಕೆ ಪ್ರತಿಕ್ರಿಯಿಸಿದರು.

‘ಮುಂದಿನ ಸೀಟ್‌ನಲ್ಲಿ ತಮ್ಮ ತೊಡೆಯ ಮೇಲೆ ಮಗುವನ್ನು ಕೂರಿಸಿಕೊಂಡಿದ್ದಾರೆ. ಎಂತಹ ಬೇಜವಾಬ್ದಾರಿತನ ಇದು. ಅದರಲ್ಲೂ ಭಾರತದಲ್ಲಿ ಜನರು ಚಾಲನೆ ಮಾಡುವ ರೀತಿಯನ್ನು ನೋಡಿದರೆ ಭಯವಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.