ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ
ಕೆಪಿಟಿಸಿಎಲ್ ಹಾಗೂ ಎಸ್ಕಾಮ್‌ಗಳಲ್ಲಿ 8080 ಹುದ್ದೆಗಳನ್ನು (ಜೂನಿಯರ್ ಸ್ಟೇಷನ್ ಅಟೆಂಡೆಂಟ್ ಹಾಗೂ ಜೂನಿಯರ್ ಲೈನ್‌ಮನ್) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2/7/2015. ಹುದ್ದೆ ಹೆಸರು: 1) ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ: 1300 ಹುದ್ದೆ, 2) ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ: 1275 ಹುದ್ದೆ, 3) ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪೆನಿ: 1213 ಹುದ್ದೆ, 4) ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ: 2030 ಹುದ್ದೆ, 5) ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ: 1405 ಹುದ್ದೆ, 6) ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ: 857 ಹುದ್ದೆ, ವೇತನ: ಮೊದಲ ಮೂರು ವರ್ಷ ಕ್ರಮವಾಗಿ: ರೂ. 10 ಸಾವಿರ, ರೂ. 11 ಸಾವಿರ ಹಾಗೂ ರೂ. 12 ಸಾವಿರ. ಬಳಿಕ ವೇತನ ಶ್ರೇಣಿ: ರೂ. ರೂ. 7350ರಿಂದ 15710
ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ ಅಥವಾ 10ನೇ ತರಗತಿ (ರಾಜ್ಯದ ಶಾಲೆಗಳಲ್ಲಿ) ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ. 200, ಮಾಹಿತಿಗೆ www.kptcl.com
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಆರ್‌ಬಿಐನಲ್ಲಿ 504 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 3/7/2015. ಹುದ್ದೆ ಹೆಸರು: ಅಸಿಸ್ಟೆಂಟ್, * ಬೆಂಗಳೂರಿನಲ್ಲಿ 40 ಹುದ್ದೆಗಳಿವೆ. ವೇತನ ಶ್ರೇಣಿ: ರೂ. 8040ರಿಂದ 20100, ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: ಶೇಕಡಾ 50 ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ, ಅರ್ಜಿ ಶುಲ್ಕ: ರೂ. 450
ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆ ಹಾಗೂ ಸಂದರ್ಶನ
ವಿಳಾಸ (ಕರ್ನಾಟಕ ಅಭ್ಯರ್ಥಿಗಳಿಗೆ): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ನೃಪತುಂಗಾ ರಸ್ತೆ, ಬೆಂಗಳೂರು: 560001
ಹೆಚ್ಚಿನ ಮಾಹಿತಿಗೆ http://rbi.org.in
ಸ್ಟಾಫ್ ಸೆಲೆಕ್ಷನ್ ಕಮಿಷನ್
ಎಸ್‌ಎಸ್‌ಸಿನಲ್ಲಿ 6578 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13/7/2015. ಹುದ್ದೆ ಹೆಸರು: ಅಸಿಸ್ಟೆಂಟ್ಸ್/ಡಾಟಾ ಎಂಟ್ರಿ ಆಪರೇಟರ್ (ಡಿಇಒ)/ಲೋವರ್ ಡಿವಿಷನ್ ಕ್ಲರ್ಕ್ (ಎಲ್‌ಡಿಸಿ), (ಅಸಿಸ್ಟೆಂಟ್, ಎಲ್‌ಡಿಸಿ ಮತ್ತು ಡಿಇಒ: 3523, 2049 ಮತ್ತು 1006) ವೇತನ ಶ್ರೇಣಿ: ರೂ. 5200ರಿಂದ 20200, ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ವಿದ್ಯಾರ್ಹತೆ: 12ನೇ ತರಗತಿ ಉತ್ತೀರ್ಣ, ಅರ್ಜಿ ಶುಲ್ಕ: ರೂ. 100, ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಕೌಶಲ ಪರೀಕ್ಷೆ
* ಬೆಂಗಳೂರು, ಮೈಸೂರು, ಕಲಬುರಗಿ, ಮಂಗಳೂರು, ಧಾರವಾಡದಲ್ಲಿ ಪರೀಕ್ಷೆ ನಡೆಯಲಿದೆ.
ವಿಳಾಸ: ದಿ ರೀಜನಲ್ ಡೈರೆಕ್ಟರ್ (ಕೆಕೆಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲ ಮಹಡಿ, ‘ಇ’ ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು: 560034 ಹೆಚ್ಚಿನ ಮಾಹಿತಿಗೆ http://ssc.nic.in
ಎಐಎಟಿಎಸ್‌ಎಲ್
ಏರ್ ಇಂಡಿಯಾ ಏರ್ ಟ್ರಾನ್ಸ್‌ಪೋರ್ಟ್ ಸರ್ವೀಸ್ (ನವದೆಹಲಿ) 200 ಹುದ್ದೆಗಳನ್ನು (ಗುತ್ತಿಗೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಸಂದರ್ಶನ ದಿನಾಂಕ 13/7/2015 ಹುದ್ದೆ ವಿವರ: ಸೆಕ್ಯೂರಿಟಿ ಏಜೆಂಟ್, ವೇತನ: ರೂ. 13,800, ವಿದ್ಯಾರ್ಹತೆ: ಪದವಿ ವಯೋಮಿತಿ: 28 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 500 ವಿಳಾಸ: ಟ್ಯಾನ್ಸಿಟ್ ಫ್ಲಾಟ್ಸ್, ವಾಟರ್ ಟ್ಯಾಂಕ್ ಬಳಿ, ಏರ್ ಇಂಡಿಯಾ ಹೌಸಿಂಗ್ ಕಾಲೊನಿ ಪ್ಲೇ ಗ್ರೌಂಡ್, ವಸಂತ ವಿಹಾರ, ನವದೆಹಲಿ: 110057 ಮಾಹಿತಿಗೆ http://www.airindia.com/careers.htm
ಸೇನಾಪಡೆ
23 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/7/2015.
ಹುದ್ದೆ ಹೆಸರು: ಎಸ್‌ಎಸ್‌ಸಿ ಆಫೀಸರ್ ಡೆಂಟಲ್ ಕಾಪ್ಸ್ ವೇತನ ಶ್ರೇಣಿ: ರೂ. 17160ರಿಂದ 39100, ವಿದ್ಯಾರ್ಹತೆ: ಶೇಕಡಾ 55 ಅಂಕಗಳೊಂದಿಗೆ ಬಿಡಿಎಸ್/ಎಂಡಿಎಸ್ ವಯೋಮಿತಿ: 45 ವರ್ಷ ದಾಟಿರಬಾರದು.
ವಿಳಾಸ: ಡೈರೆಕ್ಟರ್ ಜನರಲ್ ಆರ್ಮ್ಡ್ ಫೋರ್ಸಸ್ ಮೆಡಿಕಲ್ ಸರ್ವೀಸಸ್ (ಡಿಜಿಎಎಫ್‌ಎಂಎಸ್/ಡೆಂಟಲ್ 2), ರೂಮ್ ನಂ.25, ‘ಎಲ್’ ಬ್ಲಾಕ್, ಮಿನಿಸ್ಟ್ರಿ ಆಫ್ ಡಿಫೆನ್ಸ್, ನವದೆಹಲಿ: 110001
ಹೆಚ್ಚಿನ ಮಾಹಿತಿಗೆ www.indianarmy.nic.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.