ADVERTISEMENT

ಸೋಲಿನೊಂದಿಗೆ ಟೆನಿಸ್ ವೃತ್ತಿ ಜೀವನಕ್ಕೆ ರಫೆಲ್ ನಡಾಲ್ ಭಾವನಾತ್ಮಕ ವಿದಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ನವೆಂಬರ್ 2024, 7:07 IST
Last Updated 20 ನವೆಂಬರ್ 2024, 7:07 IST
<div class="paragraphs"><p>ರಫೆಲ್ ನಡಾಲ್ </p></div>

ರಫೆಲ್ ನಡಾಲ್

   

(ರಾಯಿಟರ್ಸ್ ಚಿತ್ರ)

ಮಲಗಾ (ಸ್ಪೇನ್‌): ವೃತ್ತಿಪರರಾಗಿ ಕೊನೆಯ ಪಂದ್ಯ ಆಡಿದ ಟೆನಿಸ್ ದಿಗ್ಗಜ ರಫೆಲ್ ನಡಾಲ್ 4–6, 4–6ರಲ್ಲಿ ವಿಶ್ವ ಕ್ರಮಾಂಕದಲ್ಲಿ 80ನೇ ಸ್ಥಾನದಲ್ಲಿರುವ ಬೊಟಿಕ್ ವಾನ್‌ ಡಿ ಝಂಡ್‌ಶುಲ್ಪ್‌ ಅವರಿಗೆ ಸೋತರು. ಡೇವಿಸ್‌ ಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ನೆದರ್ಲೆಂಡ್ಸ್ ತಂಡ ಮಂಗಳವಾರ 2–1 ರಿಂದ ಆತಿಥೇಯ ಸ್ಪೇನ್ ತಂಡವನ್ನು ಸೋಲಿಸಿತು.

ADVERTISEMENT

‘ಕ್ಲೇ ಅಂಕಣದ ಸಾಮ್ರಾಟ’ ಎನಿಸಿದ ನಡಾಲ್ ಎರಡು ದಶಕಗಳ ವೃತ್ತಿಜೀವನಕ್ಕೆ ಈ ಪಂದ್ಯದ ಮೂಲಕ ಭಾವನಾತ್ಮಕ ವಿದಾಯ ಹೇಳಿದರು. ತಮ್ಮ ವರ್ಣರಂಜಿತ ಟೆನಿಸ್‌ ಜೀವನದಲ್ಲಿ 22 ಗ್ರ್ಯಾಂಡ್‌ಸ್ಲಾಮ್ ಸಹಿತ ಹಲವು ಪ್ರಮುಖ ಪ್ರಶಸ್ತಿಗಳನ್ನು ನಡಾಲ್‌ ಗೆದ್ದಿದ್ದಾರೆ. ಇದರಲ್ಲಿ 14 ರೋಲಂಡ್‌ ಗ್ಯಾರೋಸ್‌ನ ಆವೆ ಅಂಕಣದಲ್ಲಿ ಗೆದ್ದ ಫ್ರೆಂಚ್‌ ಓಪನ್ ಪ್ರಶಸ್ತಿಗಳು ಸೇರಿವೆ.

ಡೇವಿಸ್‌ ಕಪ್‌ನ ಮೊದಲ ಸಿಂಗಲ್ಸ್‌ನಲ್ಲಿ ನಡಾಲ್ ಸೋಲುವುದು ಖಚಿತವಾದಂತೆ ‘ರಫಾ, ರಫಾ ರಫಾ...’ ಎಂಬ ಘೋಷಣೆಗಳು ಜೋರಾದವು. ಸೆಂಟರ್‌ಕೋರ್ಟ್‌ನಲ್ಲಿ ಅವರಿಗೆ ವಿದಾಯದ ಸಂದರ್ಭದಲ್ಲಿ ವಿಶೇಷ ಸಮಾರಂಭ ಹಮ್ಮಿಕೊಳ್ಳಲಾಯಿತು. ತಮ್ಮ ಯಶೋಗಾಥೆ ಕುರಿತ ವಿಡಿಯೊ ಪ್ರದರ್ಶಿಸುವಾಗ ನಡಾಲ್ ಅವರಿಗೆ ಭಾವನೆಗಳನ್ನು ತಡೆಯಲಾಗಲಿಲ್ಲ. ಕಣ್ಣೀರಧಾರೆ ಕಾಣಿಸಿತು.

‘ನನಗೆ ಟೆನಿಸ್ ಆಡಿ ದಣಿವಾಗಿಲ್ಲ. ಆದರೆ ಇನ್ನಷ್ಟು ಆಡಲು ದೇಹ ಕೇಳುತ್ತಿಲ್ಲ. ವಾಸ್ತವವನ್ನು ಸ್ವೀಕರಿಸಬೇಕಾಗಿದೆ. ನನ್ನ ನೆಚ್ಚಿನ ಹವ್ಯಾಸದಿಂದ ಬದುಕು ರೂಪಿಸಲು ಸಾಧ್ಯವಾಗಿರು
ವುದು ನನಗೆ ಅತೀವ ಸಂತೃಪ್ತಿ ನೀಡಿದೆ. ಇಷ್ಟು ದೀರ್ಘ ಕಾಲ ಆಡುತ್ತೇನೆ ಎಂದು ಅಂದುಕೊಂಡಿರಲೇ ಇಲ್ಲ. ನಾನು ಬದುಕಿಗೆ ಮತ್ತು ಸದಾ ಬೆನ್ನಿಗೆ ನಿಂತ ಅಭಿಮಾನಿಗಳಿಗೆ ಕೃತಜ್ಞ’ ಎಂದು 38 ವರ್ಷ ವಯಸ್ಸಿನ ತಾರಾ ಆಟಗಾರ ಪ್ರತಿಕ್ರಿಯಿಸಿದರು.

ಸಮಾರಂಭದ ತಕ್ಷಣ ನಡಾಲ್, ಸ್ಪೇನ್‌ನ ಇತರ ಆಟಗಾರರನನ್ನು
ಅಲಂಗಿಸಿ ಅಂಕಣದಿಂದ ನಿರ್ಗಮಿಸಿ ದರು. ಅದೇ ವೇಳೆ ಪ್ರೇಕ್ಷಕರ ಗ್ಯಾಲರಿಯತ್ತ ಕೊನೆಯ ಬಾರಿ ಎರಡೂ ಕೈಗಳನ್ನು ಬೀಸಿ ಕೃತಜ್ಞತೆ ಸಲ್ಲಿಸಿದರು.

ಎರಡನೇ ಸಿಂಗಲ್ಸ್‌ನಲ್ಲಿ ಕಾರ್ಲೊಸ್‌ ಅಲ್ಕರಾಜ್ 7–6 (0), 6–3 ರಿಂದ
40ನೇ ಕ್ರಮಾಂಕದ ನೆದರ್ಲೆಂಡ್ಸ್ ಆಟಗಾರ ಟಲ್ಲಾನ್ ಗ್ರೀಕ್‌ಸ್ಪೂರ್ ಅವರನ್ನು ಮಣಿಸಿದರು. ಆದರೆ ನಿರ್ಣಾಯಕ ಡಬಲ್ಸ್‌ನಲ್ಲಿ ಅಲ್ಕರಾಜ್– ಮಾರ್ಸೆಲ್ ಗ್ರಾನೊಲರ್ಸ್‌ ಜೋಡಿ 6–7 (4), 6–7 (3) ರಲ್ಲಿ ವಾನ್‌ ಡಿ ಝಂಡ್‌ಶುಲ್ಪ್– ವೆಸ್ಲಿ ಕೂಲಾಫ್‌ ಜೋಡಿಗೆ ಮಣಿಯಿತು. 35 ವರ್ಷದ ವೆಸ್ಲಿ ಕೂಲಾಫ್‌ ಕೂಡ ತಮ್ಮ ವೃತ್ತಿಬದುಕಿನ ಕೊನೆಯ ಟೂರ್ನಿ
ಆಡುತ್ತಿದ್ದಾರೆ.

ತಮ್ಮ ಪಂದ್ಯ ಸೋತ ನಂತರ ಅವರು ತಂಡದ ಇತರ ಆಟಗಾರರನ್ನು ಹುರಿದುಂಬಿಸಿದರು. ಕಿರಿಯ ಆಟಗಾರರು ಪಾಯಿಂಟ್ಸ್ ಗಳಿಸುವಾಗ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.