ADVERTISEMENT

NSW ಬೇಗಾ ಓಪನ್‌ ಸ್ಕ್ವಾಷ್‌ ಟೂರ್ನಿ | ಅನಾಹತ್‌ಗೆ ಗಾಯ: ಹಬೀಬಾ ಚಾಂಪಿಯನ್

ಪಿಟಿಐ
Published 17 ಆಗಸ್ಟ್ 2025, 16:03 IST
Last Updated 17 ಆಗಸ್ಟ್ 2025, 16:03 IST
<div class="paragraphs"><p>ಅನಾಹತ್‌ ಸಿಂಗ್‌</p></div>

ಅನಾಹತ್‌ ಸಿಂಗ್‌

   

‘ಎಕ್ಸ್‌’ ಚಿತ್ರ

ಬೇಗಾ (ಆಸ್ಟ್ರೇಲಿಯಾ): ಭಾರತದ ಉದಯೋನ್ಮುಖ ತಾರೆ ಅನಾಹತ್‌ ಸಿಂಗ್‌ ಅವರು ಎನ್‌ಎಸ್‌ಡಬ್ಲ್ಯು ಬೇಗಾ ಓಪನ್‌ ಸ್ಕ್ವಾಷ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದ ವೇಳೆ ಗಾಯಗೊಂಡು ನಿವೃತ್ತಿ ಹೊಂದಿದರು. ಈಜಿಪ್ಟ್‌ನ ಹಬೀಬಾ ಹನಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ADVERTISEMENT

ಅಗ್ರ ಶ್ರೇಯಾಂಕಿತೆಯಾಗಿದ್ದ ಅನಾಹತ್‌ ಅವರು ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಹಬೀಬಾ ಎದುರು 1–2ರಿಂದ (11–9, 5–11, 8–11) ಹಿನ್ನಡೆ ಹೊಂದಿದ್ದರು. ನಾಲ್ಕನೇ ಗೇಮ್‌ನಲ್ಲಿಯೂ ಹಮೀಮಾ 10–4ರಿಂದ ಮುಂದಿದ್ದರು. ಈ ವೇಳೆ ಗಾಯಗೊಂಡ ಅನಾಹತ್‌, ಕ್ರೀಡಾಂಗಣದಿಂದ ಹೊರನಡೆದರು.

17 ವರ್ಷ ವಯಸ್ಸಿನ ಅನಾಹತ್‌ ಜಾಗತಿಕ ಮಟ್ಟದ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ ತಲುಪಿದ್ದರು. ಅವರು ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಈಜಿಪ್ಟ್‌ನ ನೂರ್‌ ಖಫಾಜಿ ಎದುರು ಗೆಲುವು ಸಾಧಿಸಿದ್ದರು.

ಹಬೀಬಾ ಹನಿ –‘ಎಕ್ಸ್‌’ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.